ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೇಕಲ್: ಸೂಕ್ತ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

Vishwanath S
Updated On : 11 Dec 2013, 1:02 am

ಟೇಕಲ್: ಪಟ್ಟಣದಲ್ಲಿ ಸೂಕ್ತ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ. ಈ ಸಂಬಂಧ ಹತ್ತು ಹಲವು ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಏಕೆ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಜನತೆಯ ಪ್ರಶ್ನೆಯಾಗಿದೆ. ಸುಮಾರು 40 ವರ್ಷದಿಂದ ಬಸ್‌ನಿಲ್ದಾಣವಿಲ್ಲದೆ ದಿನನಿತ್ಯ ಓಡಾಡುವ ಪ್ರಯಾಣಿಕರು ಎಲ್ಲೆಂದರಲ್ಲೆ ಕೂರುವ ಸ್ಥಿತಿ ಉದ್ಭವಿಸಿದೆ. ಜನರಿಗೆ ನಿಲ್ಲಲು ಸರಿಯಾದ ಸ್ಥಳವಿಲ್ಲದೆ ಬಹಳಷ್ಟು ಶೋಚನೀಯ ಸ್ಥಿತಿ ತಲುಪಿದೆ.  ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪಟ್ಟಣ ಬಸ್ ನಿಲ್ದಾಣ ಬಗೆಗಿನ ಪ್ರಸ್ತಾಪ ಅವರ ಕಡತದಲ್ಲೇ ಇಲ್ಲದಾಗಿದೆ. ಪ್ರತಿ ದಿನ ಟೇಕಲ್‌ಗೆ ಮೂರರಿಂದ ನಾಲ್ಕು ಸಾವಿರ ಮಂದಿ ಬಂದು ಹೋಗುತ್ತಾರೆ. ಪಟ್ಟಣದಲ್ಲಿ ಸುಸಜ್ಜಿತ ರೈಲು ನಿಲ್ದಾಣ, ಆರೋಗ್ಯ ಕೇಂದ್ರ, ಕಾಲೇಜು, ಪ್ರೌಢಶಾಲೆ, ವಾಣಿಜ್ಯ ಕೇಂದ್ರ ಇತರೆ ಇಲಾಖಾ ಕೇಂದ್ರಗಳು, ಖಾಸಗಿ ಶಾಲೆಗಳಿದ್ದು ಸುತ್ತಮುತ್ತಲೂ ನೂರಕ್ಕೂ ಹೆಚ್ಚು ಹಳ್ಳಿಗಳಿಂದ ದಿನವಹಿ ಜನ ಇಲ್ಲಿಗೆ ಬಂದು ಹೋಗುತ್ತಾರೆ. ಅದರಲ್ಲೂ ಅತೀ ಹೆಚ್ಚಾಗಿ ಬಸ್ಸಿನಲ್ಲೆ ಓಡಾಡುವ ಜನಕ್ಕೆ ಉತ್ತಮ ಬಸ್‌ನಿಲ್ದಾಣವಿಲ್ಲದೆ ರಸ್ತೆಯ ಅಕ್ಕಪಕ್ಕ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಟೇಕಲ್ ಸರ್ಕಲ್‌ನಲ್ಲೂ ಕೂಡ ಮೂರು ಕಡೆಯಿಂದ ಬಸ್ಸುಗಳು ಬರುತ್ತಿದ್ದು ದಾರಿಯಲ್ಲೆ ನಿತ್ಯ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಂಡು ಹೋಗುತ್ತಾರೆ.  ಇನ್ನಾದರೂ ಈಗಿನ ಯುವ ಶಾಸಕ ಕೆ.ಎಸ್.ಮಂಜುನಾಥಗೌಡರು ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಬಸ್‌ನಿಲ್ದಾಣ ನಿರ್ಮಿಸಿ ಕೊಡುವರೇ ಎಂಬುದು ಈ ಭಾಗದ ಜನತೆಯ ಆಶಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement