ಬಸ್ ಡಿಕ್ಕಿ: ತಪ್ಪಿದ ಅನಾಹುತ
ಶಿಡ್ಲಘಟ್ಟ: ಪಟ್ಟಣದ ಜನ ನಿಬಿಡ ಪ್ರದೇಶವಾದ ಮಯೂರ ಸರ್ಕಲ್‌ನಲ್ಲಿ ಸಾರಿಗೆ ಇಲಾಖೆಯ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ.ಚಾಲಕ ಅನಾರೋಗ್ಯದಿಂದ ಬಳಲುತ್ತಿದ್ದು, ಅಪಸ್ಮಾರ ಬಂದ ಕಾರಣ ಬಸ್ ವಿದ್ಯುತ್ ಕಂಬಕ್ಕೆ ಹೊಡೆದಿದೆ. ಸಮಯಕ್ಕೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಅಗುವ ಅನಾಹುತ ತಪ್ಪಿದೆ. ಚಾಲಕನನ್ನು ಆಸ್ಪತ್ರೆಗೆ ಸೇರಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಹೊಟ್ಟೆನೋವಿಂದ ಬಳಲುತ್ತಿದ್ದ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಸಿ.ಟಿ.ಬ್ಲಾಕ್ ನಿವಾಸಿ ಮಾದು(35) ಆತ್ಮಹತ್ಯೆ ಮಾಡಿಕೊಂಡವರು. ಮಾದು ಅವರಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು ಹಲವಾರು ವೈದ್ಯರಲ್ಲಿ ಮತ್ತು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಿಲ್ಲ. ಇವರಿಗೆ ಮದುವೆಯಾಗಿ ತಮ್ಮ ಪತ್ನಿ ಹೆರಿಗೆಗಾಗಿ ತಮಿಳುನಾಡಿನ ಧರ್ಮಪುರಿಗೆ ತವರಿಗೆ ಹೊಗಿದ್ದರು.
ಎಂದಿನಂತೆ ಕಳೆದ ರಾತ್ರಿ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಇದರಿಂದ ಬೇಸೆತ್ತ ಮಾದು ಜೀವನದಲ್ಲಿ ಜಿಗುಪ್ಸೆಹೊಂದಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಚಾಂಪಿಯನ್‌ರೀಫ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.