ಯೋಗಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಚಿಂತಾಮಣಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ವಿಭಾಗ ಮತ್ತು ಬೆಂಗಳೂರಿನ ರಾಜೇಶ್ವರಿ ನಗರದ ರಾಜೇಶ್ವರಿ ವಿದ್ಯಾಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಚಿಂತಾಮಣಿ ನಗರದ ಪ್ರತಿಷ್ಠಿತ ಶಾಲೆಗಳ 3 ಯೋಗಾಪಟುಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಿಂತಾಮಣಿಯ ರಾಯಲ್ ಶಾಲೆಯಿಂದ ಬಾಲಕಿಯರ 17 ವರ್ಷದೊಳಗಿನ ವಯೋವುತಿಯಲ್ಲಿ ಎಂ.ಸಿ.ಪ್ರಿಯಾಂಕ, ಇದೇ ಶಾಲೆಯ ಬಾಲಕರ 14 ವರ್ಷದೊಳಗಿನ ವಯೋವುತಿಯಲ್ಲಿ ಬಿ.ಎಸ್.ಗಗನ್ ಹಾಗೂ ಕಿಶೋರ್ ವಿದ್ಯಾಶಾಲೆಯಿಂದ ಬಾಲಕಿಯರ 14 ವರ್ಷದೊಳಗಿನ ವಯೋವುತಿಯಲ್ಲಿ ಯಶಸ್ವಿನಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಯಲ್ ಶಾಲೆಯ ಬಾಲಕಿಯರ 17 ವರ್ಷದೊಳಗಿನ ವಯೋವುತಿಯಲ್ಲಿ ಸಾಯಿಚಿತ್ರ ಹಾಗೂ ಬಾಲಕಿಯರ 14 ವರ್ಷದೊಳಗಿನ ವಯೋವುತಿಯಲ್ಲಿ ಚಂದನ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಮುಂದಿನ ತಿಂಗಳು ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಮೂವರು ಯೋಗ ಪಟುಗಳು ಭಾಗವಹಿಸಲಿದ್ದಾರೆಂದು ತಂಡದ ವ್ಯವಸ್ಥಾಪಕ ಹಾಗೂ ಯೋಗ ಗುರು ಗೋವಿಂದ್ ತಿಳಿಸಿದ್ದಾರೆ.