ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಜ ಕಾಲುವೆ ಒತ್ತುವರಿ: ಮೊಕದ್ದಮೆಗೆ ಆದೇಶ

Vishwanath S
Updated On : 11 Dec 2013, 1:04 am

ಮಾಲೂರು: ರಾಜ ಕಾಲುವೆ ಮುಚ್ಚಿ ಖಾಸಗಿ ವ್ಯಕ್ತಿ ಲೇ ಔಟ್ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪದ ಮೇಲೆ ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಅವರು ಸ್ಥಳ ಪರಿಶೀಲನೆ ನೆಡೆಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಪಟ್ಟಣದ ಆದರ್ಶ ನಗರದಲ್ಲಿ ನಡೆದಿದೆ.
  ಪಟ್ಟಣದ ಆದರ್ಶ ನಗರದ ಸರ್ವೆ ನಂ 182 ರ ಪಕ್ಕದಲ್ಲಿ ಹಾದುಹೋಗಿದ್ದ ರಾಜಕಾಲುವೆಯನ್ನು ನೂತನವಾಗಿ ನಿವೇಶನ ಮಾಡುತ್ತಿರುವ ಖಾಸಗಿ ವ್ಯಕ್ತಿಯೊಬ್ಬ ಮುಚ್ಚಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಕಳೆದ ಮೂರು ದಿನದ ಹಿಂದೆ ತಹಸೀಲ್ದಾರ್ ಅವರಿಗೆ ಜನತೆ ಮಾಹಿತಿ ನೀಡಿದ್ದರು.
 ಈ ಸಂಬಂಧ ಖಾಸಗಿ ಲೇ ಔಟ್ ನಿರ್ಮಿಸುತ್ತಿರುವ ರವಿಚಂದ್ರಗೆ ಕಂದಾಯ ಅಧಿಕಾರಿಗಳು ಮುಚ್ಚಿರುವ ರಾಜಕಾಲುವೆ ತೆರವುಗೊಳಿಸುವಂತೆ ಮೌಖಿಕವಾಗಿ ಆದೇಶಿದ್ದರು.
  ಆದರೆ ಆದೇಶ ನೀಡಿ ಮೂರು ದಿನವಾದರೂ ಲೇ ಔಟ್ ಮಾಲೀಕರು ತೆರವುಗೊಳಸದ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಅವರು ದಾಖಲೆ ಪರಿಶೀಲಿಸಿದರಲ್ಲದೇ ನಾಳೆಯೊಳಗೆ ಒತ್ತುವರಿ ಮಾಡಿರುವ ರಾಜ ಕಾಲುವೆ ತೆರವುಗೊಳಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ಅಧಿಕಾರಿ ಬೀರಪ್ಪ, ಗ್ರಾಮ ಲೆಕ್ಕಿಗ ಮುನೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement