ಮೂರು ಮಂದಿ ಸುಲಿಗೆಕೋರರ ಸೆರೆ
ಕೆಜಿಎಫ್: ಆಂಡ್ರಸನ್‌ಪೇಟೆ ವಿಶೇಷ ದಳದ ಪೊಲೀಸರು ಮೂರು ಮಂದಿ ಸುಲಿಗೆಕೋರರನ್ನು ಬಂಧಿಸಿ ಅವರಿಂದ ಸುಮಾರು 60 ಸಾವಿರ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಅ.14 ರಂದು ರಾತ್ರಿ ವೆಂಕಟೇಶ್ ಮತ್ತು ಶಬರೀಶ ಎಂಬವರು ಬೈಕಿನಲ್ಲಿ ಕ್ಯಾಸಂಬಳ್ಳ-ಕೆಜಿಎಫ್ ಮುಖ್ಯ ರಸ್ತೆಯ ಗರುಡಾದ್ರಹಳ್ಳಿ ಬಳಿ ಬರುತ್ತಿದ್ದಾಗ ನಾಲ್ಕು ಮಂದಿ ಅರೋಪಿಗಳು ವಾಹನ ಅಡ್ಡಗಟ್ಟಿ ದೊಣ್ಣೆಗಳಿಂದ ವೆಂಕಟೇಶ್ ತಲೆಗೆ ಹೊಡೆದು ಆತನ ಬಳಿ ಇದ್ದ 5 ಸಾವಿ ರು. ನಗದು, ಬೈಕ್ ಹಾಗೂ ಮೊಬೈಲ್ ಫೋನನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಆಂಡ್ರಸನ್‌ಪೇಟೆ ವಿಶೇಷ ದಳದ ಪೊಲೀಸರು ಬೆಂಗಳೂರು ಕಾಡುಗೋಡಿಯ ಸಾದರಮಂಗಲದ ನಿವಾಸಿ ಸುರೇಶ್‌ಕುಮಾರ್(20) ಕ್ಯಾಸಂಬಳ್ಳಿ ಹೋಬಳಿಯ ಮರದಗಟ್ಟನಿವಾಸಿ ಎಸ್. ರಾಜೇಶ್(22) ಮತ್ತು ಬೇತಮಂಗಲ ಗ್ರಾಮದ ನಿವಾಸಿ ಎನ್. ನಿಖಿಲ್(22) ಎಂಬವರನ್ನು ಬಂಧಿಸಿ ಅವರಿಂದ ಬೈಕ್, ಮೊಬೈಲ್ ಫೋನ್ ಮತ್ತು 500 ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸುಲಿಗೆಯಲ್ಲಿ ಭಾಗಿಯಾಗಿದ್ದ ಸಿ. ರಾಜೇಶ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆ ನಡೆಸಿದ ಸಿಪಿಐ ಲಕ್ಷ್ಮೀನಾರಾಯಣ, ಪಿಎಸ್‌ಐಗಳಾದ ಸೂರ್ಯಪ್ರಕಾಶ್, ಮಾರ್ಕೋಂಡಯ್ಯ, ನಾರಾಯಣಸ್ವಾಮಿ, ಎಲ್. ಆಂಜಪ್ಪ, ಸಿಬ್ಬಂದಿಯಾದ ಬಾಲಕೃಷ್ಣ, ಮಹೇಂದ್ರ, ಗೋಪಾಲ್‌ಸಿಂಗ್, ಚಂದ್ರಶೇಖರ್ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಫಟ್ ತಿಳಿಸಿದ್ದಾರೆ.