ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇಡಿಕೆ ಈಡೇರಿಕೆಗಾಗಿ ರೈತಸಂಘ ಪ್ರತಿಭಟನೆ

Vishwanath S
Updated On : 15 Dec 2013, 1:33 am

ಗೌರಿಬಿದನೂರು: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಡಿ.ಪಾಳ್ಯ ಗ್ರಾಮ ಪಂಚಾಯ್ತಿ ಕಚೇರಿಯ ಎದುರು ಪ್ರಾಂತ ರೈತ ಸಂಘದ ಕಾರ್ಯಕರ್ತರು ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹವನ್ನು ತಹಸೀಲ್ದಾರ್ ಡಾ.ಭಾಸ್ಕರ್ ನೀಡಿದ ಭರವಸೆ ಮೇರೆಗೆ ಧರಣಿ ವಾಪಸ್ ಪಡೆಯಲಾಯಿತು.
ಗ್ರಾಮದ ಹೆಬ್ಬಾಗಿಲು ಬಳಿ ಇಟ್ಟುಕೊಂಡಿದ್ದ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ಪೊಲೀಸರ ಸಹಕಾರದಿಂದ ತೆರವುಗೊಳಿಸಲಾಯಿತು, ಜನತಾ ಕಾಲೋನಿಯಿಂದ ಸಿಹಿ ನೀರಿನ ಬಾವಿಗೆ ಹೋಗುವ ರಸ್ತೆಯ ಅಭಿವೃದ್ಧಿಗೆ ತಹಸೀಲ್ದಾರ್ ಸ್ಥಳದಲ್ಲಿಯೇ ಆದೇಶ ಮಾಡಿದರು.
ಕಾಲೋನಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಬೆಸ್ಕಾಂನ ಎಇಇಗೆ ತಹಶೀಲ್ದಾರ್ ಸೂಚಿಸಿದಾಗ ಅವರು ಒಂದು ವಾರದ ಕಾಲಾವಕಾಶ ಕೇಳಿದರು. ಪ್ರತಿಭಟನಾನಿರತರು ಅದಕ್ಕೆ ಒಪ್ಪಿದರು. ಈ ನಿಟ್ಟಿನಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಗ್ರಾಮದ ಸ್ಮಶಾನಕ್ಕೆ 13ನೇ ಹಣಕಾಸು ಯೋಜನೆಯಲ್ಲಿ ಬೇಲಿ ಹಾಕಿಸಿಕೊಡುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದಲ್ಲದೆ, ಸ್ಮಶಾನಕ್ಕೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡುವುದಾಗಿ ಸಹ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement