ಚುನಾವಣೆ: ಸಲಹಾ ಸಮಿತಿಯಲ್ಲಿ ಶಾಸಕ ನಾರಾಯಣಸ್ವಾಮಿ
ಬಂಗಾರಪೇಟೆ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸರ್ವ ರೀತಿಯಲ್ಲಿಯೂ ಸಜ್ಜಾಗಲು ನಿರ್ಧರಿಸಿದ್ದು ಈ ಸಂಬಂಧ ಎಲ್ಲಾ ರಾಜ್ಯಗಳಿಂದಲೂ ತಲಾ ಇಬ್ಬರ ಸದಸ್ಯರನ್ನು ಒಳಗೊಂಡಿರುವ ಸಲಹಾ ಸಮಿತಿ ಪಟ್ಟಿಯಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಥಾನ ಪಡೆದಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ ರಾಜ್ಯದಲ್ಲಿ ಎಸ್ಸಿಎಸ್ಟಿ ಜನಾಂಗದವರು ಅಧಿಕವಾಗಿದ್ದಾರೆ. ಅವರುಗಳು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆಯಲು ನೀರಿನ ಕೊರತೆ ಇದೆ. ಮಳೆಯನ್ನೇ ನಂಬಿದ್ದಾರೆ ಈಗ ಮಳೆ ಸಹ ಕೈಕೊಟ್ಟಿದೆ. 5 ಎಕರೆ ಒಳಗಿರುವ ರೈತರಿಗೆ ಸರ್ಕಾರವೇ ಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಪೂರೈಸಬೇಕೆಂದು ಸಲಹೆ ನೀಡಿದಲ್ಲದೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಪ್ರಚಾರದ ಕೊರತೆಯಿಂದ ಅರ್ಹರಿಗೆ ತಲುಪುತ್ತಿಲ್ಲ ಇದರಿಂದ ಗ್ರಾಮೀಣ ಭಾಗದಲ್ಲಿ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ಕುಂದಿದೆ ಎಂದರು.
ಈ ವಿಶ್ವಾಸ ಮತ್ತೆ ಬರಲು ಜನಪರ ಯೋಜನೆಗಳನ್ನು ವ್ಯಾಪಕ ಪ್ರಚಾರ ಮಾಡಬೇಕು. ಈಗಾಗಲೇ ರಾಜ್ಯ ಸರ್ಕಾರ 6 ತಿಂಗಳಿಂದ ಉತ್ತರ ಯೋಜನೆಗಳನ್ನು ಕೈಗೊಂಡಿರುವುದರಿಂದ ಇದು ಮುಂಬರುವ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒಲವನ್ನು ತೋರಬೇಕು ಅದೂ ಈಗನಿಂದಲೇ ಚಾಲ್ತಿಗೆ ಬರಬೇಕೆಂದು ಸಮಿತಿ ಸಭೆಯಲ್ಲಿ ಸಲಹೆ ನೀಡಲಾಯಿತು ಎಂದು ಶಾಸಕರು ತಿಳಿಸಿದರು.