ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪುರಸಭೆ ಸದಸ್ಯ ಮುರಳೀಧರ್‌ಗೆ ಡಾ.ಅಂಬೇಡ್ಕರ್ ಫೆಲೋಶಿಫ್ ಪ್ರಶಸ್ತಿ

Vishwanath S
Updated On : 17 Dec 2013, 12:43 pm

ಮಾಲೂರು: ಪುರಸಭೆ ಸದಸ್ಯ ಎನ್.ವಿ.ಮುರಳಿಧರ್ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನೀಡುವ ಡಾ.ಅಂಬೇಡ್ಕರ್ ಫೆಲೋಶಿಫ್ ನ್ಯಾಷನಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಅವರು ದೆಹಲಿಯಲ್ಲಿ ಕಳೆದ 13 ರಂದು ನಡೆದ 29 ನೇ ದಲಿತ ಬರಹಗಾರರ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ದೇಶದ ವಿವಿಧ ಕಡೆಯಲ್ಲಿರುವ ದಲಿತ ಪ್ರತಿಭೆಗಳು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೋರಿರುವ ಸಾಧನೆಗಳನ್ನು ಗುರ್ತಿಸಿ ಈ ಪ್ರಶಸ್ತಿ  ನೀಡಲಾಗುತ್ತಿದ್ದು,ಪುರಸಭೆ ಸದಸ್ಯ ಹಾಗೂ ಕರವೇ ಮುಖಂಡ ಎಸ್.ವಿ.ಮುರಳೀಧರ್ ರವರು ಭಾ.ದ.ಸಾ.ಅ.ನ ರಾಷ್ಟ್ರಾಧ್ಯಕ್ಷ ಡಾ.ಎಸ್.ಪಿ.ಸುಮನಾಕ್ಷರ್ ರವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕರವೇ ಅಭಿನಂದನೆ: ಕರವೇ ಕಾರ್ಯಕರ್ತ ಹಾಗೂ ಪುರಸಭೆ ಸದಸ್ಯ ಮುರಳೀದರ್  ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ತಾಲೂಕು ಕರವೇ ಅಭಿನಂದಿಸಿದೆ.
 ಸಂಘಟನೆ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ ಹೋರಾಟ ಮನೋಭಾವದ ಮುರಳಿಯಂತಹ ಯುವಕರ ಮಾರ್ಗದರ್ಶನ ಸಂಘಟನೆಗೆ ಅಗತ್ಯವಾಗಿದ್ದು, ಈ ಪ್ರಶಸ್ತಿ ಅವರಲ್ಲಿ ಹೋರಾಟದ ಜತೆಯಲ್ಲಿ ಜವಾಬ್ದಾರಿ ಸಹ ಹೆಚ್ಚಿಸಿದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement