ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರಪೇಟೆಯಲ್ಲಿ ಅಕ್ಕಿ ಗಿರಣಿ ಬಂದ್

Vishwanath S
Updated On : 17 Dec 2013, 12:42 pm

ಬಂಗಾರಪೇಟೆ: ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಗಿರಿಣಿಗಳಿಂದ ಲೆವಿ ರೂಪದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಾಜ್ಯದಾದ್ಯಂತ ಸೋಮವಾರದಿಂದ ಅಕ್ಕಿ ಗಿರಣಿ ಮಾಲೀಕರ ಸಂಘ ಕರೆ ನೀಡಿರುವ ಬಂದ್‌ಗೆ ಪಟ್ಟಣದಲ್ಲಿಯೂ ಉತ್ತಮ ಪ್ರಕ್ರಿಯೆ ವ್ಯಕ್ತಿವಾಗಿದ್ದು ಪಟ್ಟಣದಲ್ಲಿರುವ ಎಲ್ಲಾ ಗಿರಣಿ ಮಿಲ್‌ಗಳು ಬಂದ್ ಆಗಿದ್ದವು.
ಸರ್ಕಾರದ ಈ ನಿರ್ಧಾರದಿಂದಾಗಿ ಗಿರಣಿ ಮಾಲೀಕರು ಅಡಕತ್ತರಿಗೆ ಸಿಲುಕಿದ್ದು ಯಾವುದೇ ಕಾರಣಕ್ಕೂ ಸರ್ಕಾರ ಸೂಚಿಸುವುಂತೆ ಲೆವಿ ಅಕ್ಕಿಯನ್ನು ನೀಡಲು ಸಾಧ್ಯವಿಲ್ಲವೆಂದು ಪಟ್ಟುಹಿಡಿದು ರಾಜ್ಯ ಗಿರಣಿ ಮಾಲೀಕರ ಸಂಘ ಕರೆ ನೀಡಿರುವ ಬಂದ್‌ಗೆ ಪಟ್ಟಣದಲ್ಲಿರುವ 15ಕ್ಕೂ ಹೆಚ್ಚು ಗಿರಣಿಗಳು ಸೋಮವಾರ ಯಾವುದೇ ಚಟುವಟಿಕೆಗಳಿಲ್ಲದೆ ನಿಶಬ್ದವಾಗಿದ್ದವು. ಮೊದಲೇ ತಾಲೂಕು ಬರದಿಂದ ತತ್ತರಿಸಿ ಹೋಗಿದೆ. ಮಳೆ ಬೆಳೆಯಿಲ್ಲದೆ ರೈತರು ಬತ್ತ ಬೆಳೆಯಲಾಗದೆ ಕೈ ಚಲ್ಲಿ ಕೂತಿದ್ದಾರೆ. ಇಂತಹದರಲ್ಲಿ ಅಗತ್ಯಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಅದು ಕಡಿಮೆ ಬೆಲೆಗೆ ಅಕ್ಕಿಯನ್ನು ಸರ್ಕಾರಕ್ಕೆ ಪೂರೈಕೆ ಮಾಡಬೇಕೆಂದು ಒತ್ತಡ ಹೇರುವುದಲ್ಲಿ ಅರ್ಥವಿಲ್ಲ ಒಂದು ವೇಳೆ ಕಡ್ಡಾಯಗೊಳಿಸಿದರೆ ಮುಂದೆ ಗಿರಣಿಗಳನ್ನು ಶಾಶ್ವತವಾಗಿ ಮುಚ್ಚಬೇಕಾದೀತು ಎಂದು ಗಿರಣಿ ಮಾಲೀಕರು ದೂರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಪಿಎಲ್ ಪಡಿತರ ಕಾರ್ಡ್‌ದಾರರಿಗೆ 1ರು.ಗೆ 30ಕೆಜಿ ಅಕ್ಕಿ ಕೊಡುವ ಯೋಜನೆ ಜಾರಿಗೆ ತಂದಿರುವುದರಿಂದ ಹಾಗೂ ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಅಕ್ಕಿ ಉತ್ಪಾದನೆ ಕುಂಠಿವಾಗಿದ್ದು ಸರ್ಕಾರ ಚತ್ತೀಸಘಡದಿಂದ ಕೊರತೆಯ ಅಕ್ಕಿಯನ್ನು ಪೂರೈಕೆ ಮಾಡಿಕೊಳ್ಳುತ್ತಿತ್ತು, ಈಗ ಅಲ್ಲಿಂದಲೂ ಕೊರತೆ ಇರುವುದರಿಂದ ಯೋಜನೆ ಕುಂಥಿತವಾಗಬಾರದೆಂದು ಗಿರಣಿ ಮೇಲಿ ಕಣ್ಣು ಬಿದ್ದು ಕ್ವಿಂಟಾಟ್‌ಗೆ 2400ರಂತೆ ಅದು ಮಾರ್ಚ್ ಒಳಗೆ 5ಲಕ್ಷ ಟನ್ ಅಕ್ಕಿಯನ್ನು ಲೆವಿ ರೂಪದಲ್ಲಿ ನೀಡುವಂತೆ ಗಿರಣಿ ಮಾಲೀಕರಿಗೆ ನಿರ್ದೇಶ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
 ವಾಸ್ತವ ಸ್ಥಿತಿ ಅರಿಯದೆ ಸರ್ಕಾರ ಏಕಪಕ್,ಇಯ ತೀರ್ಮಾನ ಕೈಗೊಂಡಿದೆ. ಸರ್ಕಾರ ನಿಗದಿಪಡಿಸಿದಷ್ಟು ಲೆವಿ ಅಕ್ಕಿ ನೀಡಲು ಸಾಧ್ಯವಿಲ್ಲ ಅಂತಿಮವಾಗಿ ರಾಜ್ಯ ಗಿರಣಿ ಸಂಘ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತವೆ ಎಂದು ಪಟ್ಟಣದ ಗಿರಣಿ ಮಾಲೀಕ ಶಣ್ಮುಗಮ್ ತಿಳಿಸಿದ್ದಾರೆ.
ಜಿಲ್ಲೆಯಲ್ಲೇ ಪಟ್ಟಣದಲ್ಲಿದ್ದಷ್ಟು ಅಕ್ಕಿ ಗಿರಣಿಗಳು ಈಗ ಇಲ್ಲ ಬತ್ತ ಉತ್ಪಾದನೆ ಕುಂಠಿದಿಂದ ಹಲವು ಗಿರಣಿಗಳನ್ನು ಬಂದ್ಮಾಡಲಾಗಿದೆ ಇರುವ ಗಿರಣಿಗಳು ಹೊರ ರಾಜ್ಯಗಳಿಂದ ಬತ್ತವನ್ನು ಖರೀದಿಸಿಕೊಂಡು ವಹಿವಾಟು ನಡೆಸುತ್ತಿದೆ ಈಗ ಅದಕ್ಕೂ ಸರ್ಕಾರ ಕತ್ರಿ ಹಾಕಲು ಹೊರಟಿರುವುದರಿಂದ ಮುಂದೆ ವ್ಯಾಪಾರ ಮಾಡಲು ಕಷ್ಟವಾಗಲಿದೆ ಎಂದು ಗಿರಣಿ ಮಾಲೀಕ ರಘುನಾಥ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement