ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಗರ್‌ಹುಕುಂ ಸಕ್ರಮಕ್ಕೆ ಆಗ್ರಹ

Vishwanath S
Updated On : 17 Dec 2013, 12:42 pm

ಕ.ಪ್ರ.ವಾರ್ತೆ ,  ಕೋಲಾರ ,  ಡಿ. 16
ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು, ನಿವೇಶನ ರಹಿತರಿಗೆ ಮನೆ ನಿವೇಶನ ಹಂಚಿಕೆ ಮಾಡಬೇಕು, ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೊಳಿಸಬೇಕು, ಬ್ಯಾಂಕ್‌ಗಳಲ್ಲಿ ಹೊಸ ಸಾಲ ನೀಡಬೇಕು ಮತ್ತಿತರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ನಾಲ್ಕು ಕಡೆ ರಸ್ತೆ ತಡೆ ಚಳವಳಿ ನಡೆಯಿತು.
ರಾಜ್ಯದಲ್ಲಿ ಸುಮಾರು 20 ಲಕ್ಷ ಬಡ ಕುಟುಂಬಗಳು ಅಂದಾಜು 40 ಲಕ್ಷ ಎಕರೆ ಭೂಮಿಯಲ್ಲಿ ಕೃಷಿ ನಡೆಸುತ್ತಾ ಇದರ ಸಕ್ರಮಕ್ಕಾಗಿ ಹತ್ತಾರು ವರ್ಷಗಳಿಂದ ಅನೇಕ ರೀತಿಯ ಹೋರಾಟಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಭೆ ಕರೆದು ಬಗರ್‌ಹುಕುಂ ಸಾಗುವಳಿಯ ಸಕ್ರಮ ಮತ್ತು ಮನೆ ನಿವೇಶನದ ಸಮಸ್ಯೆ ಇತ್ಯರ್ಥಪಡಿಸಬೇಕು. ಲಕ್ಷಗಟ್ಟಲೇ ಮನೆಗಳನ್ನು ಹಂಚಿಕೆ ಮಾಡುವುದಾಗಿ ಮಾತನಾಡುತ್ತಿರುವ ಸರ್ಕಾರ ಶೇ.90 ಕ್ಕಿಂತ ಹೆಚ್ಚಿನ ಬಡವರಿಗೆ ನಿವೇಶನ ಇಲ್ಲದಿರುವಾಗ, ನಿವೇಶನ ಹಂಚಿಕೆ ಮಾಡುವ ಕಾರ್ಯಕ್ರಮವನ್ನು ಜಾರಿ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ದೇಶದಲ್ಲಿ ಸುಮಾರು 9 ಲಕ್ಷ ಕೋಟಿ ರು.ಗಳಷ್ಟು ಕೃಷಿ ಸಾಲವನ್ನು ಶೇ.6ರ ಬಡ್ಡಿ ದರದಲ್ಲಿ ರೈತರಿಗೆ ಮತ್ತು ಕೃಷಿ ಕೂಲಿಕಾರರಿಗೆ ನೀಡಬೇಕೆಂದು ಕೇಂದ್ರ ಸರ್ಕಾರ ನಿರ್ದೇಶನವಿದ್ದರೂ ಹಾಗೂ ಬಾಕಿ ಪ್ರಮಾಣ ಪತ್ರ, ಸಾಲಕ್ಕೆ ಅಡಮಾನಕ್ಕೆ ಸಂಬಂಧಿಸಿ ಆರ್.ಬಿ.ಐ.ನ ಸ್ಪಷ್ಟ ಮಾರ್ಗ ಸೂಚನೆಗಳು ಇದ್ದರೂ, ಇವುಗಳನ್ನು ಜಾರಿ ಮಾಡಲು ಜಿಲ್ಲೆಯ ಬಹುತೇಕ ಬ್ಯಾಂಕ್‌ಣ ಗಳು ಮುಂದಾಗುತ್ತಿಲ್ಲ. ಕೂಡಲೇ ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರಿಗೆ ಹೊಸ ಸಾಲ ನೀಡಬೇಕು, ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 8 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ನೀಡಬೇಕು, ಸಂಜೆ 6 ರಿಂದ 10 ಗಂಟೆಯ ತನಕ ತಡೆ ರಹಿತವಾಗಿ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು, ಕಾಲುಬಾಯಿ ಜ್ವರದಿಂದ ಮಣತಪಟ್ಟ ಹಸುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು, ನಗರ ಸಾರಿಗೆಯ ಮಿತಿಯನ್ನು 10 ಕಿ.ಮೀ. ತನಕ ವಿಸ್ತರಿಸಬೇಕು ಮತ್ತಿತರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘವು ರಾಜ್ಯಾದ್ಯಂತ ರಸ್ತೆತಡೆ ಚಳುವಳಿ ನಡೆಸಲು ಕರೆ ನೀಡಿತ್ತು. ಇದರ ಅಂಗವಾಗಿ ಕೋಲಾರ ಜಿಲ್ಲೆಯಲ್ಲೂ ರಸ್ತೆ ತಡೆ ಚಳವಳಿಯನ್ನು ನಡೆಸಲಾಯಿತು.
ನರಸಾಪುರ - ಮಾಲೂರು ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಮತ್ತು ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಎಂದು ಒತ್ತಾಯಿಸಿ ತಾಲೂಕಿನ ನರಸಾಪುರ - ಮಾಲೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸುಮಾರು ಅರ್ಧ ಗಂಟೆ ಕಾಲ ರಸ್ತೆತಡೆ ನಡೆಸಲಾಯಿತು.
ರಸ್ತೆ ತಡೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿ.ಮೀ. ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ತಾಲೂಕು ಅಧ್ಯಕ್ಷರಾದ ಕುರ್ಕಿ ದೇವರಾಜ್, ತಾಲೂಕು ಸಮಿತಿ ಸದಸ್ಯರಾದ ಆಂಜನೇಯಲು, ಕರಡುಬಂಡೆ ಹೊಸಹಳ್ಳಿ ಕೆ.ವಿ.ಶ್ರೀನಿವಾಸರೆಡ್ಡಿ, ಕೆ.ಎಂ.ನಾಗರಾಜ್, ಜಯರಾಮ್, ವೆಂಕಟೇಶ್, ಲಕ್ಷ್ಮೀಸಾಗರ ಗ್ರಾಮದ ರಮೇಶ್, ಕೃಷ್ಣಪ್ಪ, ನಾರಾಯಣಪ್ಪ, ಆಂಜನಪ್ಪ, ಚಾಕರಸನಹಳ್ಳಿ ಶ್ರೀಧರಮೂರ್ತಿ, ಸಿ.ಎಂ.ಮಂಜುನಾಥ್, ಬೆಳ್ಳೂರು ನಾಗರಾಜ್, ಶಾಂತಕುಮಾರ್, ಮಲ್ಲಸಂದ್ರ ಗಣೇಶಗೌಡ, ರಾಮಸಂದ್ರ ಆರ್.ಕುಮಾರ್, ಅಪ್ಪಸಂದ್ರ ಮೋಟಪ್ಪ, ಮುನಿಯಪ್ಪ, ಜೋಡಿಕೃಷ್ಣಪ್ಪ ಶ್ರೀನಿವಾಸ್ ಪುಟ್ಟಪ್ಪ, ನರಸಾಪುರ ಎಂ.ಟಿ.ಬಿ. ಕೃಷ್ಣಪ್ಪ, ಕರಿಲಕ್ಷ್ಮಮ್ಮ ಮತ್ತಿತರರು ಭಾಗವಹಿಸಿದ್ದರು.
ಕೋಲಾರ - ಚಿಂತಾಮಣಿ ರಸ್ತೆಯ ಸುಗಟೂರು ಬೆಸ್ಕಾಂ ಸ್ಟೇಷನ್ ಎದುರು ನಡೆದ ಪ್ರತಿಭಟನೆಯಲ್ಲಿ ವಿ.ನಾರಾಯಣರೆಡ್ಡಿ, ಗಂಗಮ್ಮ, ಟಿ. ಕೃಷ್ಣೇಗೌಡ ಮಂಜಮ್ಮ, ಕೆ.ಎಂ. ವೆಂಕಟೇಶ್, ಮುನಿಸ್ವಾಮಿ, ಮುನಿರಾಜು, ರಾಮಾಂಜಿ, ವೆಂಕಟರಾಮ್, ಶ್ರೀನಿವಾಸ್, ಸುಗಟೂರು ವಿಶ್ವನಾಥ್, ಶ್ರೀಧರ್, ಗೌಡಹಳ್ಳಿ ರಾಮಕೃಷ್ಣೇಗೌಡ, ಚಿಟ್ನಹಳ್ಳಿ ನಾಗರಾಜ್, ರಮೇಶ್ ಮತ್ತಿತರರು ಭಾಗವಹಿಸಿದ್ದರು. ಬೆಸ್ಕಾಂನ ಕಾರ್ಯಪಾಲಕ ಅಭಿಯಂತರರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಅಹವಾಲು ಆಲಿಸಿದರು.
ಬೇತಮಂಗಲ ರಸ್ತೆಯ ಭಟ್ರಹಳ್ಳಿ ಗೇಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘ ಉಪಾಧ್ಯಕ್ಷರಾದ ಹೊಲ್ಲಂಬಳ್ಳಿ ವಿ. ವೆಂಕಟೇಶಪ್ಪ, ಅಪ್ಪಯ್ಯಣ್ಣ, ಜೆ.ಎಂ.ಎಸ್. ರಾಜ್ಯಾಧ್ಯಕ್ಷೆ ವಿ.ಗೀತಾ, ಡಿವೈಎಫ್‌ಐ ಮುಖಂಡರಾದ ಎಂ. ವಿಜಯಕೃಷ್ಣ, ಎ.ವಿ.ರಮೇಶ್, ಸುಬ್ರಮಣಿ, ಕೆ.ವಿ. ರಾಜೇಂದ್ರ, ಡಿ.ಪಿ. ನಾಗರಾಜ್, ಡಿಎಸ್.ವೆಂಕಟರಮಣಪ್ಪ ಮತ್ತಿತರರು ಭಾಗವಹಿಸಿದ್ದರು.
ಕೋಲಾರ - ಶ್ರೀನಿವಾಸಪುರ ರಸ್ತೆಯ ವೀರಾಪುರ ಗೇಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಎನ್.ಎನ್.ಶ್ರೀರಾಮ್, ಎಸ್.ರಮೇಶ್, ಯಲ್ಲಪ್ಪ, ತೊರದೇವಂಡಹಳ್ಳಿ ರಾಜಪ್ಪ, ವೀರಾಪುರ ಜಗದೀಶ್, ಬೀರಮಾನಹಳ್ಳಿ ಜಯರಾಮರೆಡ್‌ಡಿ, ವಿಜಯಕುಮಾರ್ ಮತ್ತಿತರರು ಇದ್ದರು.
ರಸ್ತೆ ತಡೆಯಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement