ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿರಡಿ ಸಾಯಿ ಸೇವಾ ಟ್ರಸ್ಟ್‌ನಿಂದ ದತ್ತಾತ್ರೇಯ ಜಯಂತಿ

Vishwanath S
Updated On : 17 Dec 2013, 12:41 pm

ಮಾಲೂರು: ಸ್ಥಳೀಯ ಶಿರಡಿ ಸಾಯಿ ಸೇವಾ ಟ್ರಸ್ಟ್ ವತಿಯಿಂದ ದತ್ತಾತ್ರೇಯ ಜಯಂತಿಯನ್ನು ಪಟ್ಟಣದ  ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಗಿನ ಜಾವ ಶಂಕರನಾರಾಯಣಸ್ವಾಮಿಗೆ ಪಂಚಾಮೃತ ಅಭಿಷೇಕದ ನಂತರ ನೆರದಿದ್ದ ನೂರಾರು ಮಹಿಳಾ ಭಕ್ತರಿಂದ ವಿಶೇಷ ಸಾಯಿ ಭಜನೆ ನಡೆಯಿತು.ಮಧ್ಯಾಹ್ನ ಶಿರಡಿ ಪಂಚಾರತಿ ನಂತರ ಅನ್ನಸಂರ್ತಪಣೆ ನಡೆಯಿತು.
ಇದೇ ಸಂಧರ್ಭದಲ್ಲಿ ಇಲ್ಲಿನ ವೈಟ್ ಗಾರ್ಡ್‌ನ್‌ನಲ್ಲಿರುವ ನಂದಾದೀಪ ಬುದ್ದಿಮಾಂದ್ಯ ವಸತಿ ಶಾಲಾ ಮಕ್ಕಳಿಗೆ ದಾನಿಗಳಿಂದ ವಿವಿಧ ರೀತಿಯ ಸವಲತ್ತು ವಿತರಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಎ.ಶ್ರೀನಿವಾಸ್ ರೆಡ್ಡಿ ಮಾತನಾಡಿ, ಶೋಷಿತರ ಬಗ್ಗೆ ಹೆಚ್ಚು ಕರುಣೆವುಳ್ಳ ಶಿರಡಿ ಸಾಯಿಬಾಬರ ಜೀವನದರ್ಶನ ಎಲ್ಲರೂ ಪಾಲಿಸಿದಾಗ ಮಾತ್ರ ಉತ್ತಮ ಸಮಾಜ ಸಾಧ್ಯ.ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವ ಮೂಲಕ ಸಾಯಿನಾಥರ ಕೃಪೆಗೆ ಪಾತ್ರರಾಗಬೇಕು ಎಂದು ನುಡಿದರು. ಟ್ರಸ್ಟ್‌ನ ಗೌರವಾಧ್ಯಕ್ಷ ಎಂ.ಎಲ್.ಕೃಷ್ಣಪ್ಪ,ಉಪಾಧ್ಯಕ್ಷ ಮುನಿಕೃಷ್ಣಪ್ಪ,ನರಸಿಂಹಯ್ಯ,ಎನ್.ಮಂಜುನಾಥ್,ಚೇತನ್,ಆಂಜನೇಯರೆಡ್ಡಿ,ಸುರೇಶ್ ಕುಮಾರ್,ಸುಬ್ರಮಣಿ,ಗಜೇಂದ್ರ,ಮಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement