ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆ.ವಿ. ಅಯ್ಯರ್ ಮನೆ ಕಬಳಿಕೆ ಯತ್ನ

Vishwanath S
Updated On : 19 Dec 2013, 1:01 am

ಕ.ಪ್ರ.ವಾರ್ತೆ ,  ಕೋಲಾರ ,  18
ನಾಡಿನ ಖ್ಯಾತ ಸಾಹಿತಿ, ಕೋಲಾರ ಜಿಲ್ಲೆಯ ದೇವರಾಯ ಸಮುದ್ರದ ಹೆಮ್ಮೆಯ ಪುತ್ರ ಕೆ.ವಿ.ಅಯ್ಯರ್ ಅವರು ಹುಟ್ಟಿದ ಮನೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಬಳಿಕೆ ಮಾಡಲು ಯತ್ನಿಸುತ್ತಿದ್ದಾರೆಂದು ಕೆ.ವಿ.ಅಯ್ಯರ್ ಮಗ ಡಾ.ಕರ್ಣ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿ.12ರ ಕನ್ನಡಪ್ರಭದ ಬೈಟುಕಾಫಿ ಪುರವಣಿಯಲ್ಲಿ ನಮ್ಮ ತಂದೆಯವರ ಸಾಧನೆಗೆ ಸಂಬಂಧಿಸಿದ ವರದಿ ನೋಡಿ ಸಂತೋಷವಾಯಿತು. ಆದರೆ, ದೇವರಾಯಸಮುದ್ರದಲ್ಲಿ ತಂದೆ ಹುಟ್ಟಿದ ಮನೆಯನ್ನು ತಾವು ಮಾರಾಟ ಮಾಡಿಲ್ಲ. ಕೆಲವರು ಪಿತ್ರಾರ್ಜಿತ ಆಸ್ತಿಯನ್ನು ದೋಚಲು ಕೆ.ವಿ.ಅಯ್ಯರ್ ಮನೆ ಮಾರಾಟವಾಗಿದೆ ಎಂದು ಪುಕಾರು ಹಬ್ಬಿಸುತ್ತಿದ್ದು ಜನತೆ ಇದನ್ನು ನಂಬಬಾರದೆಂದು ತಿಳಿಸಿದ್ದಾರೆ.
ತಾವು ದೇವರಾಯ ಸಮುದ್ರಕ್ಕೆ ಭೇಟಿ ನೀಡದಿರುವುದನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ನಮ್ಮ ತಾತ ಮತ್ತು ತಂದೆ ಆಸ್ತಿ ಲಪಟಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮನೆಗೆ ಸಂಬಂಧಿಸಿದ ಯಾವುದೇ ದಾಖಲೆ ನಮಗೆ ಸಿಗದಂತೆ ಮಾಡಿದ್ದಾರೆ. ಒಂದು ವೇಳೆ ಯಾರಾದರೂ ಮನೆಯನ್ನು ತಮ್ಮ ಸ್ವಂತ ಮಾಡಿಕೊಂಡಿದ್ದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದೇವರಾಯ ಸಮುದ್ರದಲ್ಲಿನ ಕೆ.ವಿ.ಅಯ್ಯರ್ ಮನೆಯನ್ನು ನಾವು ಚಾರಿಟಬಲ್ ಉದ್ದೇಶಗಳಿಗೆ ಬಳಕೆ ಮಾಡಲು ಚಿಂತನೆ ಮಾಡಿದ್ದೇವೆ. ಪಿತ್ರಾರ್ಜಿತ ಆಸ್ತಿಯಾಗಿರುವ ಮನೆಯನ್ನು ಮಾರಾಟ ಮಾಡಬೇಕಾದರೆ ಮಗ ಡಾ. ಕರ್ಣರವರ ಸಹಿ ಅತಿ ಮುಖ್ಯ, ಅಲ್ಲದೆ ಸೊಸೆಯಾದ ನನಗೂ ಹಾಗೂ ಮಗನಾದ ರೌಹಿಣೇಯಗೂ ಅಧಿಕಾರವಿದೆ, ಮನೆ ದಾಖಲೆಗಳು ನಮ್ಮ ಬಳಿ ಇಲ್ಲದಿರುವುದರಿಂದ ಕೆಲವರು ಕಬಳಿಕೆಗೆ ಯತ್ನಿಸುತ್ತಿರಬಹುದು. ದೇವರಾಯಸಮುದ್ರ ಗ್ರಾಮ ಪಂಚಾಯಿತಿ ಹಾಗೂ ಮುಳಬಾಗಿಲು ತಾಲೂಕು ಕಚೇರಿಯಲ್ಲಿ ದಾಖಲೆ ಹುಡುಕಿಸಿ ಮನೆಯನ್ನು ನಮ್ಮ ಸ್ವಾಧೀನಕ್ಕೆ ಪಡೆದು ನಂತರ ಅದನ್ನು ಸರ್ಕಾರ ಮತ್ತು ಜನತೆಯ ಸಹಕಾರದಿಂದ ಸಮಾಜ ಸೇವೆಗೆ ಬಳಕೆ ಮಾಡುವುದಾಗಿ ಡಾ. ಕರ್ಣ ಪತ್ನಿ ವಸಂತ ಸಹ ಸ್ಪಷ್ಟನೆ ನೀಡಿದ್ದಾರೆ.
ಕನ್ನಡಪ್ರಭದಲ್ಲಿ ಕೆ.ವಿ. ಅಯ್ಯರ್ ಮನೆ ಪರರ ಪಾಲು ಎಂಬ ವರದಿ ಪ್ರಕಟವಾಗದಿದ್ದಲ್ಲಿ ನಮಗೆ ದಾಖಲೆಗಳನ್ನು ಹುಡುಕಿಸಲು ಕಷ್ಟವಾಗುತ್ತಿತ್ತು. ಬೈಟು ಕಾಫಿಯಿಂದ ನಮಗೆ ಅನುಕೂಲವಾಗಿದೆ. ವರ್ಷಗಳ ಹಿಂದೆ ನಮ್ಮ ತಾತನ ಮನೆಯಲ್ಲಿ ಆಶ್ರಯ ಪಡೆದಿದ್ದವರೇ ಆಸ್ತಿ ಕಬಳಿಕೆ ಮಾಡಲು ಯತ್ನಿಸಿರಬಹುದೆಂಬ ಅನುಮಾನ ಉಂಟಾಗಿದ್ದು ಯಾವುದೇ ಕಾರಣಕ್ಕೂ ತಾತನವರ ಆಸ್ತಿ ದುರುಪಯೋಗ ಆಗುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ರೌಹಿಣೇಯ ಸಹ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement