ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕರೆ

Vishwanath S
Updated On : 19 Dec 2013, 1:03 am

ಕೆಜಿಎಫ್: ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ತಮ್ಮ ಪ್ರತಿಭೆಗೆ ಸೂಕ್ತ ಮಾರ್ಗದರ್ಶನದೊಂದಿಗೆ ಸ್ವಾವಲಂಬನೆ ಜೀವನ ನಡೆಸಲು ಮುಂದಾಗಬೇಕು. ಮತ್ತು ತಮ್ಮ ತಂದೆ ತಾಯಿ ಮಕ್ಕಳ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಕನಸು ನನಸಾಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಡಿಡಿಪಿಐ ಹಾಗೂ ಶಿಕ್ಷಣ ತಜ್ಞ ಸಿ.ಬಿ.ಹನುಮಂತಪ್ಪ ಹೇಳಿದರು. ಕೆಜಿಎಫ್ ಕ್ಷೇತ್ರದ ಕರಡುಗೂರು, ಜಕ್ಕರಸಕುಪ್ಪಂ ಮತ್ತು ಪಾರಂಡಹಳ್ಳಿ ಗ್ರಾಮಗಳ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಸಮಾರೋಪದಲ್ಲಿ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಶಿಕ್ಷಕರ ಉತ್ಸಾಹ, ಹೆತ್ತವರ ಪ್ರೋತ್ಸಾಹ ಇಲಾಖೆಯ ಉತ್ತಮ ನಿರ್ವಹಣೆಯೊಂದಿಗೆ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಬಹುದು. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಶಿಕ್ಷಕರು ಅವರಲ್ಲಿ ತುಂಬಲು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವುದಲ್ಲದೇ ಅವರಲ್ಲಿರುವ ಸೂಕ್ತ ಪ್ರತಿಭೆಯು ಸುಸಂಕ್ರುತ ಜೀವನವನ್ನು ನಡೆಸುವುದಲ್ಲದೆ ಮುಂದೆ ಅವರು ಈ ಪ್ರತಿಭೆಯನ್ನೇ ಸ್ವಾವಲಂಬಿ ಜೀವನಕ್ಕೆ ಅಳವಡಿಸಿಕೊಳ್ಳಬಹುದು ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಶ್ರೀನಿವಾಸ್ ಅವರು, ಪಠ್ಯಕ್ರಮದಲ್ಲಿರುವಂತೆ 84 ಮೌಲ್ಯಗಳು ಭೌತಿಕವಾಗಿ ಜ್ಞಾನವಾಗಿ ಹೊರಹೊಮ್ಮಿ ತಮ್ಮ ಬೆಳವಣಿಗೆಯಲ್ಲಿ ಬದಲಾವಣೆಯನ್ನು ಕಾಣಿಸುವುದರೊಂದಿಗೆ ಪಠ್ಯೇತರ ವಿಷಯಗಳು ಮಕ್ಕಳಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲೂಕು ಶಿಕ್ಷಕರ ಸಂಘದ ಅದ್ಯಕ್ಷ ಅಪ್ಪಾಜಿಗೌಡ, ಬಿಆರ್‌ಪಿ ಎನ್.ಕೆ.ಮಂಜುನಾಥ್, ಸಿಆರ್‌ಪಿ ರಾಮಮೂರ್ತಿ, ಆನಂದ್‌ಕುಮಾರ್, ತಿಮ್ಮೇಗೌಡ, ರಾಮಚಂದ್ರರೆಡ್ಡಿ, ಲಕ್ಷ್ಮಪ್ಪ, ನಾರಾಯಣರೆಡ್ಡಿ, ಹನುಮಂತಾಚಾರ್, ಮುಖ್ಯ ಶಿಕ್ಷಕ ಶ್ರೀರಾಮಯ್ಯ, ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement