ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಚಾರ ನಿಯಮ ಕಡ್ಡಾಯ ಪಾಲನೆಯಿಂದ ಅಪಘಾತ ತಡೆಯಲು ಸಾಧ್ಯ: ಶಾಸಕ

Vishwanath S
Updated On : 19 Dec 2013, 1:03 am

ಚಿಂತಾಮಣಿ: ನಗರದಲ್ಲಿ ಸಂಚಾರ ನೀತಿ ನಿಯಮ ಕಡ್ಡಾಯವಾಗಿ ವಿದ್ಯಾರ್ಥಿಗಳು ಪಾಲನೆ ಮಾಡಿದಲ್ಲಿ ಅಪಘಾತ ತಡೆಯಲು ಸಾಧ್ಯವೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು. ನಗರದ ಗುರುಭವನ ಮುಂಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರ ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲ್ಲೂಕು ವಾಣಿಜ್ಯ ಕೇಂದ್ರ. ದಿನ ನಿತ್ಯ ನಗರದಲ್ಲಿ ವಾಹನ ಸಂಚಾರವು ದಟ್ಟಣೆಯಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಸಂಚಾರಿ ಪೋಲೀಸ್ ಠಾಣೆ ತೆರೆಯಲಾಗುವುದೆಂದು ಶಾಸಕ ಭರವಸೆ ನೀಡಿದರು. ವಿದ್ಯಾರ್ಥಿಗಳು ರಸ್ತೆ ದಾಟುವಾಗ ಎಡ ಮತ್ತು ಬಲ ಭಾಗಗಳಲ್ಲಿ ಬರುವ ವಾಹನಗಳನ್ನು ಗಮನಿಸಿ ಮುಂದೆ ಹಾದು ಹೋಗುವುದು ಸೂಕ್ತ ಹಾಗೂ ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪದಾಚಾರಿಗಳು ಪಾಲಿಸಿ ತಮ್ಮ ಅಮೂಲ್ಯವಾದ ಪ್ರಾಣಗಳನ್ನು ಕಾಪಾಡಕೊಳ್ಳಬೇಕೆಂದು ತಿಳಿಸಿದರು.  ನಗರಠಾಣೆ ಎಸ್‌ಐ ಮುರಳಿ ಮಾತನಾಡಿ ರಸ್ತೆ ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡಬೇಕು. ದ್ವಿಚಕ್ರ ವಾಹನ ಚಾಲನೆ ಪರವಾನಗಿ ಕಡ್ಡಾಯವಾಗಿ ಪಡೆಯಬೇಕೆಂದರು. ಮುಖ್ಯ ಅತಿಥಿ ಪ್ರಾಂಶುಪಾಲ ಎ.ನಾರಾಯಣಸ್ವಾಮಿ,ಬ್ರಿಂಗಿಂಗ್ ಸಂಸ್ಥೆಯ ಸೈಯದ್ನೂರು ಉದ್ದೀನ್,ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಸಾದಪ್ಪ,ವೆಂಕಟರವಣಪ್ಪ,ಶ್ರೀರಾಮಪ್ಪ,ಮಂಜುನಾಥ್,ಆರ್.ಪ್ರಕಾಶ್, ನಟರಾಜ್,ಮುಖಂಡರಾದ ವಿ.ಅಮರ್, ಲೋಕೇಶ್,ಕೃಷ್ಣಮೂರ್ತಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement