ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳಕ್ಕೆ ಒತ್ತಾಯ
ಕ.ಪ್ರ.ವಾರ್ತೆ , ಕೋಲಾರ , ಡಿ.20
ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಕನಿಷ್ಠ 25 ರು.ಗೆ ನಿಗಧಿ ಪಡಿಸಬೇಕೆಂದು ಒತ್ತಾಯಿಸಿ ತಾಲೂಕು ತ್ರಿಚಕ್ರ ವಾಹನ ಚಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ನೂತನ ಅಧ್ಯಕ್ಷ ಕೆ.ನಾರಾಯಣಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಸಂಘದ ನಿಯೋಗ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ದಿನ ಬಳಕೆಯ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ, ಇಂಧನ ದರ ದುಬಾರಿಯಾಗಿದೆ. ಈಗಿನ ಆಟೋ ಪ್ರಯಾಣ ದರ 20 ಇರುವುದರಿಂದ ಕನಿಷ್ಟ 25ರುಗಳಿಗೆ ಹೆಚ್ಚಿಸಿ ಆಟೋ ರಿಕ್ಷಾ ಚಾಲಕರ ಹಿತ ಕಾಪಾಡಬೇಕೆಂದು ಒತ್ತಾಯಿಸಲಾಯಿತು. ನಗರದಲ್ಲಿ ಸರಿಯಾದ ರಸ್ತೆಗಳು ಇಲ್ಲದೆ ವಾಹನ ಚಾಲನೆ ಮಾಡುವುದು ಕಷ್ಟವಾಗುತ್ತಿದೆ. 3 ವರ್ಷ ಹಿಂದೆ ಪ್ರಯಾಣ ದರವನ್ನು ಪುನರರ್ವಿಮರ್ಶನೆ ಮಾಡಿ ಈಗಿನ ಜೀವನಾಶ್ಯಕತೆಗೆ ತಕ್ಕಂತೆ ಜೀವನ ನಿರ್ವಹಿಸಲು ಕನಿಷ್ಠ ಪ್ರಯಾಣ ದರವನ್ನು 5 ರು ಹೆಚ್ಚಿಸಿ 25 ರು.ಗಳಿಗೆ ನಿಗಧಿಪಡಿಸಬೇಕೆಂದು ಮುಖಂಡರು ಮನವಿ ಮಾಡಿಕೊಂಡರು.
ಹಿರಿಯ ಮುಖಂಡ ಎನ್.ಅಮ್ಜಾದ್ ಪಾಷ, ಚೋಟಸಾಬ್, ರವಿಕುಮಾರ್, ಗಂಗಮ್ಮನ ಪಾಳ್ಯ ಚಂದ್ರು, ಷಣ್ಮುಗ, ರಾಜಣ್ಣ, ರಾಮೇಗೌಡ, ರಮೇಶ್, ಮುನಿವೆಂಕಟಪ್ಪ, ವೇಣು, ವೆಂಕಟಸ್ವಾಮಿ, ಕೀಲುಕೋಟೆ ಬಾಬು, ಬಸವನತ್ತ ಮಹೇಶ್, ಮಂಜುನಾಥ್ ನಿಯೋಗದಲ್ಲಿ ಇದ್ದರು.