ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಯಾ ಪ್ರದೇಶದ ಆಹಾರ ಪದ್ಧ್ದತಿಗೆ ಒತ್ತು ನೀಡಿ

Vishwanath S
Updated On : 21 Dec 2013, 1:19 am

ಮಾಲೂರು: ರಾಜ್ಯ ಸರ್ಕಾರ ಬಿಸಿಯೂಟದಲ್ಲಿ ಆಯಾ ಪ್ರದೇಶದ ಆಹಾರ ಪದ್ದತಿಗೆ ಒತ್ತು ನೀಡಿದಾಗ ಮಾತ್ರ ಮಕ್ಕಳ ಆರೋಗ್ಯದೊಂದಿಗೆ ಯೋಜನೆ ಸಾರ್ಥಕತೆ ಪಡೆಯುತ್ತದೆ ಎಂದು ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.
ಅವರು ಅಕ್ಷರದಾಸೋಹ ಇಲಾಖೆ ಬಿಸಿಯೂಟ ಅಡುಗೆ ಸಿಬ್ಬಂದಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬಯಲು ಪ್ರದೇಶವಾಗಿರುವ ನಮ್ಮ ಪ್ರದೇಶದ ಮಕ್ಕಳು ರಾಗಿ ಮುದ್ದೆಗೆ ಹೊಂದಿಕೊಂಡಿದ್ದು, ಉಪ್ಪಿಟ್ಟು ಅಥವಾ ಗೋದಿ ಚಪಾತಿಯನ್ನು ಇಷ್ಟಪಡುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಯಾ ಪ್ರದೇಶದಲ್ಲಿ ವಾಡಿಕೆ ಇರುವ ಅಹಾರವನ್ನೇ ಮಕ್ಕಳ ಬಿಸಿಯೂಟದಲ್ಲಿ ಜಾರಿಗೆ ತರಬೇಕು ಎಂದ ಅವರು ಅಡುಗೆ ಸಿಬ್ಬಂದಿ ತಮ್ಮ ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಯಲ್ಲಮ್ಮ ಮಾತನಾಡಿ ಎನ್.ಆರ್.ಐ.ಜಿ.ಯಲ್ಲಿ ದಿನಕ್ಕೆ 140 ರು.ಸಿಗಬೇಕಾದರೆ ಅಡುಗೆ ಸಹಾಯಕಿಯಾಗಿರುವ ಸಿಬ್ಬಂದಿಗೆ ಕೇವಲ 30 ರು.ನೀಡುತ್ತಿರುವುದು ಖಂಡನೀಯ.ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮುಟ್ಟುವಂತೆ ವರದಿಯನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಿನ ಬಿಸಿಯೂಟವನ್ನು ಇಲ್ಲಿನ ಶಾಸಕ ಕೆ.ಎಸ್.ಮಂಜುನಾಥ್ ಇಸ್ಕಾನ್ ಸಂಸ್ಥೆಗೆ ವಹಿಸಲಿದ್ದಾರೆ ಎಂಬ ಮಾಹಿತಿ ಬಂದಿದ್ದು, ಇದರಿಂದ ಕಳೆದ ಹತ್ತು ವರ್ಷದಿಂದ ಕಡಿಮೆ ಸಂಬಳ ಇದ್ದರೂ ಕೆಲಸ ಮಾಡುತ್ತಿರುವ ನಮ್ಮಗೆಲ್ಲ ಅನ್ಯಾಯವಾಗಲಿದೆ ಎಂಬ ಅಡುಗೆ ಸಹಾಯಕಿಯರ ಮನವಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯ್ತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೀಮೋಲ್ ಮೋಹನ್ ಈ ಬಗ್ಗೆ ಜಿಪಂಯಲ್ಲಿ ಚರ್ಚಿಸಿ ನ್ಯಾಯ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು. ಕಾರ್ಯನಿರ್ವಾಹಣಾಧಿಕಾರಿ ಸಂಜೀವಯ್ಯ, ಬಿಇಓ ಸುಬ್ರಮಣಿ,ತಾಲೂಕು ಆರೋಗ್ಯಾಧಿಕಾರಿ ಡಾ.ಅನುರಾಧ,ಡಾ.ದಿವ್ಯ,ಅಕ್ಷರ ದಾಸೋಹ ಅಧಿಕಾರಿ ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement