ನಿರಂತರ ವಿದ್ಯುತ್ ಇನ್ನು ಮರೀಚಿಕೆ
ಟೇಕಲ್: ಮಾಲೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಇನ್ನು ನಿರಂತರ ವಿದ್ಯುತ್ ಎಂಬ ಮಾತು ಅಪರೂಪವಾಗಿ ಕಾಣಸಿಗುತ್ತದೆ.
ಇದೇ ಡಿ. 2ರಂದು ಬೆಂಗಳೂರಿನ ವಿದ್ಯುತ್ ಇಲಾಖೆ ಮಾಲೂರು ಸಮೀಪವಿರುವ ವಿದ್ಯುತ್ ಪ್ರಸರಣ 220 ಕೆ.ವಿ. ಕಾರ್ಯಾಗಾರಕ್ಕೆ ಒಂದು ಸಂದೇಶ ರವಾನಿಸಿದ್ದು, ನಿಯಮಿತ ಲೋಡ್ ಶೆಡ್ಡಿಂಗ್ ಮಾಡಲು ತಿಳಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದರಿಂದ, ಟೇಕಲ್ 66 ಉಪಕೇಂದ್ರಕ್ಕೆ ಬೇಡಿಕೆಯಷ್ಟು ವಿದ್ಯುತ್ ಸಿಗುವುದು ಇನ್ನು ಮರೀಚಿಕೆ ಆಗಿದೆ.
ಜನತೆ ಪರಿತಾಪ: ಸುಮಾರು ಹದಿನೇಳು ದಿನಗಳಿಂದ ನಿರಂತರ ವಿದ್ಯುತ್, ದಿನದ 24 ಗಂಟೆಯಲ್ಲಿ 6ರಿಂದ 8 ಗಂಟೆ ನೀಡುತ್ತಿದ್ದು, ತಾಲ್ಲೂಕಿನಲ್ಲಿ ಈ ಹಿಂದೆ ವಿದ್ಯುತ್ಗೆ ಬರವಿಲ್ಲವೆಂದು ಕರ್ನಾಟಕ ರಾಜ್ಯದಲ್ಲಿ, ಗುಜರಾತ್ ಮಾದರಿಯಲ್ಲಿ ಮೊದಲ ಬಾರಿಗೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ನಿರಂತರ ವಿದ್ಯುತ್ ನೀಡಲಾಯಿತು. ಆದರೂ, ಅದರ ಫಲ ಸಿಗುತ್ತಿಲ್ಲ ಎಂಬುದು ಜನತೆಯ ಆರೋಪವಾಗಿದೆ.
ಇದರಿಂದ ಟೇಕಲ್ ವ್ಯಾಪ್ತಿಯ 66 ಉಪಕೇಂದ್ರಕ್ಕೆ 16 ಉಪ ವಿದ್ಯುತ್ ವಿಭಾಗಗಳಿದ್ದು (16 ಡಡಿಛಡ್ಝ್ಟಿಟಿಡ) ಅದಕ್ಕೆ ನಿರಂತರ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ ಹಾಗೂ ಜನತೆ ನಿರಂತರ ವಿದ್ಯುತ್ ಕಂಬಿ ಬಹುತೇಕ ವಾಣಿಜ್ಯೋದ್ಯಮಿಗಳು, ಜೆರಾಕ್ಸ್, ಬ್ಯಾಂಕ್, ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಇಂಟರ್ನೆಟ್, ಪ್ಲೋರ್ ಮಿಲ್, ಪಂಪ್ ಸೆಟ್ ಹಾಗೂ ಅತೀ ಮುಖ್ಯವಾಗಿ ಟೇಕಲ್ ಆಸ್ಪತ್ರೆಯ ನಿರಂತರ ಸೇವೆ ಇವುಗಳಿಗೆ ಬಹಳ ತೊಂದರೆಯಾಗುತ್ತಿದ್ದು ಜನತೆ ಪರಿತಪಿಸುವ ಪರಿಸ್ಥಿತಿಯಲ್ಲಿದ್ದಾರೆ.
ಭರವಸೆ ಸುಳ್ಳು: ಈ ಹಿಂದೆ, ಗುಜರಾತ್ ಮಾದರಿಯಲ್ಲಿ 24 ಗಂಟೆಗಳ ನಿರಂತರ ವಿದ್ಯುತ್ ನೀಡಿದಾಗ, ಅಂದಿನ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ತಿಳಿಸಿದ್ದು ನಿರಂತರವಾಗಿ ರಾಜ್ಯದಲ್ಲೆ ಮೊದಲ ಬಾರಿಗೆ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟರ ಪ್ರತಿಫಲಾಕ್ಷೆಯ ಮೇರೆಗೆ ಈ ಕಾರ್ಯ ಮುಗಿದಿದ್ದು ಈ ಭಾಗದ ಜನತೆಗೆ ವಿದ್ಯುತ್ ಕ್ಷಾಮವಿಲ್ಲವೆಂದು ತಿಳಿಸಿದ್ದರು. ಆದರೆ ಈಗ ಅದೆಲ್ಲಾ ಸುಳ್ಳಾಗುತ್ತಾ ಬಂದಿದೆ.
ಹಳ್ಳಿಗಳಿಗೆ ವಿದ್ಯುತ್ ಬೇಕು: ಸಿಕ್ಕ ಮಾಹಿತಿ ಪ್ರಕಾರ ಮಾಲೂರಿನ 220 ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಬಂಗಾರಪೇಟೆ ಮಾಲೂರು ತಾಲ್ಲೂಕಿಗೆ ಸುಮಾರು 11 ಸಬ್ ಸ್ಟೇಷನ್ಗಳಿಗೆ ವಿದ್ಯುತ್ ನೀಡಲಾಗುತ್ತಿದ್ದು ಇವರ ಸಾಮರ್ಥ್ಯ 280 ಮೆ.ವ್ಯಾಟ್ ವಿದ್ಯುತ್ ನೀಡಬೇಕಾಗಿತ್ತು. ಆದರೆ, ಈಗ ಬರುತ್ತಿರುವುದು 40 ರಿಂದ 60 ಮೆ.ವ್ಯಾಟ್ ಹಾಗೂ ಟೇಕಲ್ನ 66 ಸಬ್ ಸ್ಟೇಷನ್ನಲ್ಲಿ 12ರಿಂದ 13 ಮೆ. ವ್ಯಾಟ್ ಬಳಸಲಾಗುತ್ತಿದ್ದು, ಈಗ ಬರುತ್ತಿರುವುದು 3 ಮೆ.ವ್ಯಾಟ್ ಮಾತ್ರ. ಈ ಕೇಂದ್ರದಿಂದ ನಿರಂತರ ಜ್ಯೋತಿಗೆ 2 ಫೀಡರ್, ನೀರಾವರಿಗೆ 6 ಫೀಡರ್, ಕೈಗಾರಿಕೆಗಳಿಗೆ 1 ಫೀಡರ್ ಬಳಸುತ್ತಿದ್ದು, 150ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ನೀಡಬೇಕಾಗಿದೆ.
ಅಲ್ಲಿ ಮುಷ್ಕರ, ಇಲ್ಲಿ ಸಮಸ್ಯೆ: ಜಾರ್ಖಂಡ್ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಕೇಂದ್ರದ ಕಾರ್ಮಿಕರು ಮುಷ್ಕರ ಮಾಡುತ್ತಿದ್ದರ ಹಿನ್ನೆಲೆಯಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಇರುವುದರಿಂದ ಈ ಸಮಸ್ಯೆ ಉದ್ಭವವಾಗುತ್ತಿದೆ ಎಂದು ಇಲಾಖೆಯ ಕೆಲವು ಮೂಲಗಳು ತಿಳಿಸಿವೆ.
ಸಿಎಂ ಮನಸ್ಸು ಮಾಡುತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ತಂದು, ಅತೀ ಶೀಘ್ರವಾಗಿ ರಾಜ್ಯದಲ್ಲಿ ಇರುವ ವಿದ್ಯುತ್ ಬರವನ್ನು ನೀಗಿಸಬಹುದು. ಆದರೆ ಮುಖ್ಯಮಂತ್ರಿಗಳು ಮನಸ್ಸು ಮಾಡುತ್ತಿಲ್ಲ ಎಂಬುದು ಜನತೆಯ ಆರೋಪ.
ಜನತೆಯ ಅಳಲು: ನಿರಂತರ ವಿದ್ಯುತ್ ಕಾಮಗಾರಿಯಲ್ಲಿ ಕೆಲವು ಕಂಬಗಳಾಗಲಿ, ವೈರ್ಗಳಾಗಲಿ ಇತರೆ ಉಪಕರಣಗಳಾಗಲಿ ಎಲ್ಲವೂ ಕಳಪೆ ಗುಣಮಟ್ಟದ್ದಾಗಿದ್ದು ಮಳೆ ಗಾಳಿ ಬಂದರೆ ವಿದ್ಯುತ್ ನಿಲುಗಡೆಯಾಗುತ್ತಿತ್ತು. ಆದರೆ ಇದೀಗ ಅದು ಸರಿಪಡಿಸಲಾಗಿದ್ದು, ವಿದ್ಯುತ್ ನೀಡುವಲ್ಲಿ ಇಲಾಖೆಯವರ ನಿರ್ಲಕ್ಷ್ಯವೋ, ಇಲ್ಲವೋ ಕೆಲವು ಅಧಿಕಾರಿಗಳ ದುರುಪಯೋಗವೋ ತಿಳಿಯದಾಗಿದೆ. ಒಟ್ಟಾರೆ ಟೇಕಲ್ 66 ಉಪಕೇಂದ್ರಕ್ಕೆ ಸುಮಾರು 17 ದಿನಗಳಿಂದ ನಿರಂತರ ಕಗ್ಗತ್ತಲಲ್ಲಿ ಕಾಲ ದೂಡುವ ಪರಿಸ್ಥಿತಿ ಒದಗಿ ಬಂದಿದೆ. ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ವಿದ್ಯುತ್ ಸಮಸ್ಯೆಯನ್ನುಸರಿಪಡಿಸಬೇಕೆಂಬುದೇ ಅಳಲಾಗಿದೆ.
-ಟೇಕಲ್ ಲಕ್ಷ್ಮೀಶ್