ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿರಂತರ ವಿದ್ಯುತ್‌ಗಾಗಿ ರೇಷ್ಮೆ ಹುರಿಕಾರರ ಆಗ್ರಹ

Vishwanath S
Updated On : 21 Dec 2013, 1:20 am

ಶಿಡ್ಲಘಟ್ಟ, ಡಿ. 20: ಪಟ್ಟಣದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ರೇಷ್ಮೆ ಹುರಿಕಾರರು ಬೆಸ್ಕಾಂ ಆಧಿಕಾರಿಗಳಿಗೆ ದೂರಿದರು. ಪಟ್ಟಣದಲ್ಲಿ ಪ್ರತಿ ಗಂಟೆಗೊಮ್ಮೆ ವಿದ್ಯುತ್ ನಿಲುಗಡೆ ಮಾಡುವುದರಿಂದ ರೇಷ್ಮೆ ಹುರಿ ತುಂಡಾಗುವುದರ ಜೊತೆಗೆ ಕೆಲಸಗಾರರ ತೊಂದರೆಯಿಂದ ಸಾವಿರಾರು ರು.ಗಳ ನಷ್ಟ ಅನುಭವಿಸುವಂತಾಗಿದೆ ಎಂದು ರೇಷ್ಮೆ ಹುರಿಕಾರರು ಬೆಸ್ಕಾಂ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನೀಯರ್, ಚೀಫ್ ಇಂಜಿನಿಯರ್ ಹಾಗೂ ಕೋಲಾರ ಸೂಪರಿಂಟೆಂಡೆಂಟ್ ಇಂಜಿನೀಯರ್ ಅವರಿಗೆ ಮೊಬೈಲ್ ಮೂಲಕ ದೂರಿದರು. ಶಿಡ್ಲಘಟ್ಟ ಬೆಸ್ಕಾಂ ಸಹಾಯಕ ಕಾರ್ಯನಿರ್ವಹಣಾ ಅಭಿಯಂತರರಾದ ಎಂ. ಹರಿಬಾಬು ರವರು ದೂರುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೇಷ್ಮೆ ಹುರಿಕಾರರು ಕೇಳಿದಕ್ಕೆ ಕೆಲಕಾಲ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೋಲಾರ ಸೂಪರಿಂಟೆಂಡೆಂಟ್ ಇಂಜನಿಯರ್ ಶಿಡ್ಲಘಟ್ಟಕ್ಕೆ ಬಂದು ರೇಷ್ಮೆ ಹುರಿಕಾರರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹುರಿಕಾರರಾದ ಸಂಜೀವಪ್ಪ, ಬಿ. ಜಗದೀಶ್, ಸುಬ್ರಹ್ಮಣಿ, ರಾಮಾಂಜಿ, ವಾಸು ಎನ್. ಲಕ್ಷ್ಮೀನಾರಾಯಣ ಇನ್ನೂ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement