ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿನ ಸಮಸ್ಯೆ ಪರಿಹಾರಕ್ಕೆ 18 ಕೊಳವೆ ಬಾವಿ

Vishwanath S
Updated On : 21 Dec 2013, 1:19 am

ಮಾಲೂರು: ಪಟ್ಟಣದ ನೀರಿನ ಸಮಸ್ಯೆ ಪರಿಹರಿಸಲು 18 ಕೊಳವೆ ಬಾವಿಗಳನ್ನು ಕೊರೆಸುತ್ತಿರುವುದಾಗಿ ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು. ಅವರು ಇಲ್ಲಿನ ಬಸ್ ನಿಲ್ದಾಣದಲ್ಲಿ ಸ್ಥಳೀಯ ತ್ರಿಚಕ್ರ ವಾಹನ ಚಾಲಕರು ಹಾಗೂ ಮಾಲೀಕರ ಸಂಘ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತ ಪಟ್ಟಣದ ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತೀವ್ರ ವಾಗಿರುವುದನ್ನು  ಗಮನಿಸಿ ನಾಳೆಯಿಂದಲ್ಲೇ ಪಟ್ಟಣದಲ್ಲಿ ಅವಶ್ಯವಿರುವ ಕಡೆ ಕೊಳವೆ ಬಾವಿ ಕೊರೆಸುವಂತೆ ಪುರಸಭೆಗೆ ಆದೇಶಿಸಲಾಗಿದೆ ಎಂದರು. ಮನವಿ: ಒಳ ಚರಂಡಿ ವ್ಯವಸ್ಥೆಯಡಿ ಪಟ್ಟಣದ ಪ್ರತಿ ಮನೆಯವರು ತಮ್ಮ ಮನೆಯಿಂದ ಒಳಚರಂಡಿಗೆ ಸಂಪರ್ಕಿಸುವ ಪೈಪನ್ನು ಆಳವಡಿಸಲು ತಾವೇ ವೆಚ್ಚವನ್ನು ಭರಿಸಬೇಕಾಗಿದೆ. ಈ ಕಾಮಗಾರಿಗಾಗಿ ರಾಜ್ಯ ಸರ್ಕಾರ ರು. 3 ಕೋಟಿ ನೀಡುವ ಭರವಸೆ ನೀಡಿದ್ದು, ಹಣ ಬಿಡುಗಡೆಯಾದ ನಂತರ ಮನೆ ಮಾಲೀಕರು ತಾವೂ ಭರಿಸಿದ ವೆಚ್ಚವನ್ನು ವಾಪಸ್ ಮಾಡುವುದಾಗಿ ತಿಳಿಸಿದರು. ನಗರದ ಪ್ರತೀ ಮನೆಯವರು ಶೀಘ್ರವಾಗಿ ಒಳಚರಂಡಿ ವ್ಯವಸ್ಥೆಗೆ ಪೈಪ್‌ಗಳನ್ನು ಆಳವಡಿಸಿಕೊಳ್ಳುವ ಮೂಲಕ ರಸ್ತೆ ಡಾಂಬರೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ವಸತಿ ಹೀನರಿಗೆ ನಿವೇಶನ: ಪಟ್ಟಣದ ಸುತ್ತಮುತ್ತಲು ಭೂಮಿ ಬೆಲೆ ಗನನಕ್ಕೆ ಏರಿರುವುದರಿಂದ ನಿವೇಶನಕ್ಕಾಗಿ ಪುರಸಭೆಯಲ್ಲಿ  ಈ ಹಿಂದೆ ಹಣ ಕಟ್ಟಿದವರಿಗೆಲ್ಲ ನಿವೇಶನ ಸಿಗುವುದು ಕಷ್ಟ ಸಾಧ್ಯ. ಹೊರವಲಯದ ವೈಟ್ ಗಾರ್ಡನ್ ನಂತರದಲ್ಲಿ ಗುರ್ತಿಸಲಾಗಿರುವ 5 ಎಕರೆ ಭೂಮಿಯಲ್ಲಿ ನಿವೇಶನ ಮಾಡುವ ಪ್ರಯತ್ನ ಮಾಡಲಾಗುವುದು ಎಂದ ಶಾಸಕರು ಸಾರ್ವಜನಿಕರ ಸೇವೆಯಲ್ಲಿ ಪ್ರಾಮಾಣೀಕತೆ ತೋರುತ್ತಿರುವ ಆಟೋ ಚಾಲಕರಲ್ಲಿ ವಸತಿ ಹೀನರಿದ್ದರೆ, ಅವರಿಗೂ ನಿವೇಶನ ನೀಡುವುದಾಗಿ ಹೇಳಿದರು. ಕರ್ನಾಟಕ ರಾಜ್ಯ ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ವಿ. ಸುರೇಶ್ ಕುಮಾರ್ ಪ್ರಾಸ್ತಾವಿಕ ಮಾತಾಡಿದರು.
ಸನ್ಮಾನ: ಇದೇ ಸಂಧರ್ಭದಲ್ಲಿ ಕನ್ನಡ ಪರ ಹೋರಾಟ ನಡೆಸಿದ ಬಂಗಾರಪೇಟೆಯ ಪಲ್ಲವಿ ಮಣಿ,ಉರ್ದು ಶಾಲೆಯ ಇಲಿಯಾಜ್ ಪಾಷ,ಮಾಸ್ತಿ ಪಂಚಾಯ್ತಿ ಅಧ್ಯಕ್ಷ ಹೆಚ್.ವಿ. ಶ್ರೀನಿವಾಸ್, ಪುರಸಭೆ ಸದಸ್ಯರುಗಳಾದ  ಮುರಳಿಧರ್,ಜಾಕೀರ್ ಖಾನ್ ಹಾಗೂ ಅತ್ಯುತ್ತಮ ನಡುವಳಿಕೆಯ ಆಟೋ ಚಾಲಕರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಂ.ವಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಲಿಂಗೇಶಯ್ಯ, ಹಿರಿಯ ವಕೀಲ ಅಪ್ಪಾಜಿ ಗೌಡ, ಶೀನಪ್ಪ, ರಾಮಾಂಜಿ, ಶ್ರೀನಿವಾಸ, ವೆಂಕಟೇಶ್, ಮುನಿರಾಜು, ಅಬ್ದುಲ್ ನಾಸೀರ್, ಅಮ್ಜದ್, ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement