ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಫಲವತ್ತಾದ ಭೂಮಿಯಲ್ಲಿ ಜಲ್ಲಿ ಕ್ರಷರ್‌ಗೆ ಅನುಮತಿ ನೀಡದಿರಲು ಆಗ್ರಹಿಸಿ ಪ್ರತಿಭಟನೆ

Vishwanath S
Updated On : 21 Dec 2013, 1:18 am

ಚಿಂತಾಮಣಿ: ಫಲವತ್ತಾದ ಕೃಷಿ ಜಮೀನಲ್ಲಿ ಜಲ್ಲಿ ಕ್ರಷರ್ ಫ್ಯಾಕ್ಟರಿಗೆ ಅನುಮತಿ ನೀಡದಂತೆ ಕೋಟಗಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಕೋಟಗಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನರಸಾಪುರ ಗ್ರಾಮಕ್ಕೆ ಸೇರಿದ ಸರ್ವೇ ನಂ. 1,72,53,11 ರ ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್ ಮಿಷನ್ ಹಾಕಲು ಹೊಸಕೋಟೆ ತಾ. ತ್ಯಾಗರಾಜು ಎಂಬ ಉದ್ಯಮಿ ರಾಜಕೀಯ ಹಾಗೂ ಹಣ  ಬಲದಿಂದ  ಫಲವತ್ತಾದ ಕೃಷಿ ಜಮೀನಿನಲ್ಲಿ ಜಲ್ಲಿ ಕ್ರಷರ್ ಹಾಕಲು ಮುಂದಾಗಿರುವುದಕ್ಕೆ ಇಲ್ಲಿನ ರೈತರು ವಿರೋಧ ವ್ಯಕ್ತಪಡಿಸಿದರು.
ಈ ಬಗ್ಗೆ ನರಸಾಪುರ,ಸುಜ್ಜನಹಳ್ಳಿ ಮತ್ತು ಕುರಮಾರಲಹಳ್ಳಿ ರೈತರ ಅಭಿಪ್ರಾಯ ಪಡೆದಿಲ್ಲ. ಈ ಭಾಗದಲ್ಲಿ 2  ಕೆರೆಗಳು ಇದ್ದು, ರೈತರು ಮುಂಗಾರು ಹಾಗೂ ಹಿಂಗಾರು ಬೆಳೆಗಳನ್ನು ಬೆಳೆಯುತ್ತಾರೆ. ಇದನ್ನು ಅರಿಯದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಾಯು ಮಾಲಿನ್ಯ,ಜಿಲ್ಲಾ ಗಣಿ ಅಧಿಕಾರಿಗಳು ಅನುಮತಿ ನೀಡಲು ಮುಂದಾಗಿರುವ ಬಗ್ಗೆ ಸುತ್ತಮುತ್ತಲಿನ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಜಲ್ಲಿ ಕ್ರಷರ್‌ಗೆ ಅನುಮತಿ ನೀಡದಂತೆ ಆಗ್ರಹಿಸಿದ್ದಾರೆ.
ಜಲ್ಲಿ ಕ್ರಷರ್ ಅನಾಹುತ: ಗಣಿ ಮಾಲೀಕರ ಧನದಾಹಕ್ಕೆ ರೈತರು ನಿತ್ಯ ನರಳುವಂತಾಗಿದೆ. ಪ್ರತಿನಿತ್ಯ ಇಲ್ಲಿ  ಭೂಕಂಪವಾದಂತಹ ಅನುಭವವಾಗುತ್ತದೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಪ್ಲೋರೋ ಬ್ಲಾಸ್ ಸ್ಫೋಟದ ಪ್ರಭಾವದಿಂದ ಗ್ರಾಮಸ್ಥರು ಜಾನುವಾರುಗಳು ವಿವಿಧ ರೀತಿಯ ಕಾಯಿಲೆಗಳಿಗೆ ಒಳಗಾಗಿ ಮನೆಗೋಡೆಗಳು ಬಿರುಕು ಬಿಟ್ಟು, ಹೃದಯ ರೋಗ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ತಡೆಯದಿದ್ದಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ರೈತಪರ ಸಂಘಟನೆಗಳ ಜತೆಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದಾಗಿ ರೈತರು ಎಚ್ಚರಿಸಿದ್ದಾರೆ.



-ಎನ್.ಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement