ರಾಷ್ಟ್ರೀಯ ಮತದಾರರ ದಿನಾಚರಣೆ
ಕೋಲಾರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಆಡಳಿತದಿಂದ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ.
ಮತದಾರರ ನೋಂದಣಿ ಸೇರಿದಂತೆ ಚುನಾವಣೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಬಂಧ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿಯವರು ತಿಳಿಸಿದ್ದಾರೆ. ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಇಂದು ಶಾಲಾ ವಾರ್ಷಿಕೋತ್ಸವ
ಕೋಲಾರ: ತಾಲೂಕಿನ ಕುಂಬಾರಹಳ್ಳಿಯಲ್ಲಿರುವ ಸಿ.ಮುನಿಸ್ವಾಮಿ ಪಬ್ಲಿಕ್ ಸ್ಕೂಲ್ನ ನಾಲ್ಕನೇ ವರ್ಷದ ಶಾಲಾ ವಾರ್ಷಿಕೋತ್ಸವ ಡಿ.21 ರಂದು ಸಂಜೆ 5.30 ಗಂಟೆಗೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಚಾರ್ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಸಿ. ಮುನಿಸ್ವಾಮಿ ಫೌಂಡೇಷನ್ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಅಧ್ಯಕ್ಷತೆ ವಹಿಸುವರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ್ ಪ್ರಸಾದ್, ಐ.ಜಿ.ಪಿ ಅರುಣ ಚಕ್ರವರ್ತಿ, ಜಾರಿ ನಿರ್ದೇಶನಾಲಯದ ಉಪನಿರ್ದೇಶಕ ಸುಧಾಮ್ ದಾಸ್, ಜಿಲ್ಲಾ ಎಸ್ಪಿ ರಾಮ್ ನಿವಾಸ್ ಭಾಗವಹಿಸಲಿದ್ದಾರೆ.
ಬಿಎಸ್ಎನ್ಎಲ್ 3ನೇ ಸಮ್ಮೇಳನ
ಕೋಲಾರ: ಬಿ.ಎಸ್.ಎನ್.ಎಲ್ ರಾಷ್ಟ್ರೀಯ ಫೆಡರೇಷನ್ ನೌಕರರ ವತಿಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಂದಾಯ ಜಿಲ್ಲೆಗಳ ಸಹಕಾರದೊಂದಿಗೆ ಮೂರನೇ ಸಮ್ಮೇಳನ ಮತ್ತು ವಿಚಾರಣ ಸಂಕಿರಣವನ್ನು ಡಿ.21 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದ ಉದ್ಘಾಟನೆಯನ್ನು ಎನ್.ಡಿ. ರಾಮರಾಜು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಮುಳಬಾಗಿಲು ಕ್ಷೇತ್ರದ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಡೆಪ್ಯೂಟಿ ಜನರಲ್
ಮ್ಯಾನೇಜರ್ ಎಂ.ಜಿ. ನಿರ್ಮಲ ಸಿ.ಕೆ. ಮತಿವಣ್ಣನ್, ಕೆ.ಎಸ್. ಶೇಷಾದ್ರಿ, ಕೃಷ್ಣಮೋಹನ್, ಅಧಿಕಾರಿಗಳಾದ ಕಲೈಸೆಲ್ವಿ, ಬಿ.ಎಸ್. ಶಿವಲಿಂಗಪ್ಪ, ವೈ.ಎಸ್. ಪೂಜಾರ್, ನರೇನ್ ನಂದಕುಮಾರ್, ವಿ.ಎಸ್. ಮೋಹನ್ ಕೃಷ್ಣ, ಟಿ.ವಿ. ಚಲಪತಿ ಭಾಗವಹಿಸಲಿದ್ದಾರೆ.
23 ರಂದು ರೈತ ದಿನಾಚರಣೆ
ಕೋಲಾರ: ಬಂಗಾರಪೇಟೆ ಕೃಷಿ ಇಲಾಖೆ ವತಿಯಿಂದ ಡಿ.23 ರಂದು ಬೆಳಿಗ್ಗೆ 11.30 ಗಂಟೆಗೆ ರೈತರ ದಿನಾಚರಣೆ ಹಾಗೂ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮವನ್ನು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದೆ.
ಕೆ.ಜಿ.ಎಫ್ ಶಾಸಕಿ ರಾಮಕ್ಕ ಉದ್ಘಾಟಿಸುವರು. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ ರಾಜಗೋಪಾಲ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ, ಡಾ. ಎಸ್.ಆರ್. ಲೀಲಾ, ಡಿ.ಎಸ್. ವೀರಯ್ಯ, ನಜೀರ್ ಅಹ್ಮದ್, ಡಾ. ಎ.ಹೆಚ್. ಶಿವಯೋಗಿಸ್ವಾವು, ವೈ.ಎ. ನಾರಾಯಣಸ್ವಾಮಿ ಹಾಗೂ ಇತರೆ ಗಣ್ಯರು ಭಾಗವಹಿಸುವರು.
ಮಾನವ ಹಕ್ಕುಗಳ ಆಯೋಗದ ಸದಸ್ಯರ ಪ್ರವಾಸ
ಕೋಲಾರ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜಿ. ಹುನಗುಂದ ರವರು ಡಿ.21 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಮಧ್ಯಾಹ್ನ 12 ಗಂಟೆಗೆ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾನವ ಹಕ್ಕುಗಳ ಪ್ರಾಮುಖ್ಯತೆ ಬಗ್ಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೆ.ಜಿ.ಎಫ್ನಲ್ಲಿ ಏರ್ಪಡಿಸಿರುವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಭಾಗವಹಿಸಿ ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ.
ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ
ಕೋಲಾರ: ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ಕೇಂದ್ರದ ತಂಡ ಡಿ.23 ರಂದು ಬಂಗಾರಪೇಟೆ, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕುಗಳಲ್ಲಿ ಪ್ರವಾಸ ಮಾಡಲಿದೆ. ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆಗೆ ಹಾಗೂ ಬರಪರಿಸ್ಥಿತಿಗೆ ಸಂಬಂಧಿಸಿದಂತೆ ಪೂರ್ಣ ವಿವರಗಳೊಂದಿಗೆ ಹಾಜರಾಗಿ ತಂಡಕ್ಕೆ ಮಾಹಿತಿಯನ್ನು ಒದಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಬುಲ್ಬುಲ್ ಉತ್ಸವಕ್ಕೆ
ಕೋಲಾರ ಸ್ಕೌಟ್ಸ್ ತಂಡ ಪಯಣ
ಕ.ಪ್ರ.ವಾರ್ತೆ , ಕೋಲಾರ , ಡಿ.20
ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ 36ನೇ ಬುಲ್ಬುಲ್ ಉತ್ಸವಕ್ಕೆ ಜಿಲ್ಲೆಯ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ತಂಡ ಪ್ರಯಾಣ ಬೆಳೆಸಿತು. ಈ ಉತ್ಸವದಲ್ಲಿ ತಾಲೂಕಿನ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಾದ ವಡಗೂರು, ಎಚ್.ಜಿ.ಹೊಸೂರು, ಮಾಸ್ತೇನಹಳ್ಳಿ, ವಳಗೇರನಹಳ್ಳಿ ಶಾಲೆಗಳ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರು ಉತ್ಸವದಲ್ಲಿ ಯಶಸ್ವಿಯಾಗಿ ಭಾಗವಹಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಜಿಲ್ಲಾ ಸಂಘಟಕ ವಿ.ಬಾಬು, ಜಿಲ್ಲಾ ತರಬೇತಿ ಆಯುಕ್ತ ವಿ.ಎಂ.ನಾರಾಯಣಸ್ವಾಮಿ ಶುಭ ಕೋರಿದ್ದು, ಈ ತಂಡದೊಂದಿಗೆ ಸ್ಕೌಟ್ಸ್ ಶಿಕ್ಷಕರಾದ ಜರಿನಾ ಬೇಗಂ, ಸುಮಿತ್ರಮ್ಮ ಮತ್ತು ಶ್ರೀನಿವಾಸಗೌಡ ತೆರಳಿದ್ದಾರೆ.