ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಳೆ ರೋಗ: ಮುನ್ನೆಚ್ಚರಿಕೆ ಇರಲಿ

Vishwanath S
Updated On : 23 Dec 2013, 1:03 am

ಗೌರಿಬಿದನೂರು: ರೋಗ ರಹಿತವಾದ ಬಾಳೆ ಬೆಳೆಯಲು ರೈತರು ಈಬಾಳೆಯನ್ನು ನಾಟಿ ಮಾಡುವ ಮುನ್ನ ಸೂಕ್ತ ಔಷದೋಪಚಾರ ಮಾಡುವ ಮೂಲಕ ರೋಗ ರಹಿತ ಇಳುವರಿಯ ಬಾಳೆ ಬೆಳೆಯಿರಿ ಎಂದು ಕೋಲಾರದ ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ರವೀಂದ್ರರೆಡ್ಡಿ ತಿಳಿಸಿದರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ತಾಲೂಕು ತೋಟಗಾರಿಕೆ ಇಲಾಖೆಯು ಮಂಚೇನಹಳ್ಳಿ ಮತ್ತು ತೊಂಡೇಭಾವಿ, ಹೊಸೂರು ಹೋಬಳಿ ರೈತರಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿಯೋಜನೆಯನ್ವಯ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಅಂಗಾಂಶ ಬಾಳೆ ಉತ್ತಮಗುಣಮಟ್ಟದ್ದಾಗಿದ್ದರೂ ನಾಟಿ ಮಾಡುವ ಮುನ್ನ ಮುನ್ನೆಚ್ಚರಿಕೆ ಅಗತ್ಯ ಎಂದರು.
ಅರಬಾವಿ ಕೃಷಿ ಕೇಂದ್ರ ಬೇಸಾಯ ಶಾಸ್ತ್ರದ ಸಹಪ್ರಾಧ್ಯಾಪಕ ಶ್ರೀಕಂಠ ಪ್ರಸಾದ್ ಮಾತನಾಡಿ, ಬಾಳೆ ಬೆಳೆಯಲ್ಲಿ ಅಂತರಬೆಳೆಯನ್ನೂ ಬೆಳೆಯಬಹುದು. ಆದರೆ ಅದಕ್ಕೆ ಸೂಕ್ತ ಪೂರ್ವತಯಾರಿ ಮತ್ತು ತಜ್ಞರ ಸಲಹೆ ಮುಖ್ಯ. ಪಪ್ಪಾಯಿ ಮತ್ತು ಬಾಳೆಯನ್ನು ಅಂತರಬೆಳೆಯಾಗಿ ಬೆಳೆಯಬಹುದೇ ಎಂಬ ರೈತ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಸೂಕ್ತ ಮಾರ್ಗದರ್ಶನದಿಂದ ಉತ್ತಮವಾಗಿ ಬೆಳೆಯಬಹುಹುದು ಎಂದರು.
ಬಯೋಸಾಲ್ ರಸಗೊಬ್ಬರದ ಬಗ್ಗೆ ಮಹೇಶ್, ಎಚ್.ಯು. ಗುಗ್ಲಿ ಅಂಗಾಂಶ ಬಾಳೆ ಸಸಿಗಳ ಬಗ್ಗೆ ಅನಂತಕೃಷ್ಣ ಹಾಗೂ ಹನಿನೀರಾವರಿ ಬಗ್ಗೆ ಸ್ವಾತಿ ಸ್ಯಾನಿಟರಿ ವೇರ್ ಸಂಸ್ಥೆಯ ವಿ.ಡಿ. ಗಣೇಶ್ ಜೈನ್ ಇರಿಗೇಶನ್ ಪರವಾಗಿ ವಿವರಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಂದೀಶ್ ಮಾತನಾಡಿ, ಕಾರ್ಯಾಗಾರ ತಾಲೂಕಿನಲ್ಲಿ ಬಾಳೆ ಬೆಳೆಯುತ್ತಿರುವ ರೈತರು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಲ್ಲಿ ನೀಡುತ್ತಿರುವ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಎಎಚ್‌ಒ ಜವರಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement