ರೈತ ಬಳೆದ ಬೆಳೆಗೆ ತಾನೇ ಬೆಲೆ ನಿಗದಿ ಮಾಡುವ ನಿಯಮ ಬೇಕು
ಮಾಲೂರು: ರೈತ ಬಳೆದ ಬೆಳೆಗೆ ತಾನೇ ಬೆಲೆ ನಿಗದಿ ಮಾಡುವ ನಿಯಮ ತರುವ ಮೂಲಕ ರಾಜ್ಯ ಸರ್ಕಾರ ರೈತ ಸ್ವಾವಲಂಬಿಯಾಗಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು.
ಪಟ್ಚಣದ ತಿರುಮಲ ಕಲ್ಯಾಣ ಮಂಟಪದಲ್ಲಿ ರೈತರ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಸಹಕಾರದಲ್ಲಿ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಕಷಿ ನಂಬಿ ಬದುಕು ಸಾಗಿಸುತ್ತಿರುವ ರೈತಾಪಿ ಜನರು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲಿದ್ದು, ಶಾಶ್ವತ ನೀರಾವರಿ ಯೋಜನೆ ಅನುಷ್ಠಾನವಾಗದೆ ನೀರಿನ ಸಮಸ್ಯೆ ಬಗ್ಗೆ ಹರಿಯುವುದಿಲ್ಲ ಎಂದರು.
ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ ಮಾತನಾಡಿ, ಭವಿಷ್ಯ ಉಜ್ವಲವಾಗಬಹುದೆಂಬ ಆಸೆಯಲ್ಲಿ ಇಲ್ಲಿನ ರೈತರು ತಮ್ಮ ಜಮೀನುಗಳನ್ನು ನೀಡಿ ಈಗ ಅದೇ ಕಾರ್ಖಾನೆಯಲ್ಲಿ ಡಿ.ದರ್ಜೆ ನೌಕರರಾಗಿ ದುಡಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ರಾಜ್ಯ ಸರ್ಕಾರದೂಂದಿಗೆ ಚರ್ಚಿಸಿ ಭೂಮಿ ನೀಡುವ ವ್ಯಕ್ತಿಯ ಕುಟುಂಬಕ್ಕ ಉನ್ನತ ನೌಕರಿ ಸಿಗುವಂತೆ ಮಾಡಬೇಕು ಎಂದು ಅಗ್ರಹಿಸಿದರು. ಇದೇ ಸಂಧರ್ಭದಲ್ಲಿ ತಾಲೂಕಿನಲ್ಲಿ ಉತ್ತಮ ಬೆಳೆ ಬೆಳೆದ ಪ್ರಗತಿ ಪರ ರೈತರಾದ ಚಿಕ್ಕಪಿಳ್ಳಪ್ಪ, ಪ್ರಕಾಶ್, ಮುನಿಯಪ್ಪ ಅವರನ್ನು ಕೃಷಿ ಇಲಾಖೆವತಿಯಿಂದ ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿದರು. ತಾಪಂ ಸದಸ್ಯರಾದ ಗೋಪಾಲ್ಗೌಡ, ಲೋಕೇಶ್, ಕೃಷ್ಣಪ್ಪ, ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ, ಮಂಜುಳ ವೆಂಕಟೇಶ್, ಪಾಪಣ್ಣ ಇದ್ದರು.
ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ನಿಧನದ ಗೌರವಾರ್ಥ ಸಭೆ ಮುಕ್ತಾಯಗೊಳಿಸಲು ಶಾಸಕ ಮಂಜುನಾಥ್ ಗೌಡ ತಿಳಿಸಿದರಲ್ಲದೇ ಒಂದು ನಿಮಿಷ ಮೌನ ಆಚರಸಲಾಯಿತು.