ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಿರಿಯ ನಾಗರಿಕರ ಕ್ರೀಡಾಕೂಟ

Vishwanath S
Updated On : 24 Dec 2013, 12:47 pm

ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಿರಿಯ ನಾಗರಿಕರ ಕ್ರೀಡಾಕೂಟ ನಡೆಯಿತು.
60 ರಿಂದ 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಯುವಕರನ್ನು ನಾಚಿಸುವಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು. 50 ಮೀ ಓಟ, ಗುಂಡು ಎಸೆತ, ಬುಟ್ಟಿಯಲ್ಲಿ ಚೆಂಡು ಹಾಕುವುದು ಮತ್ತು ತೆಂಗಿನ ಕಾಯಿ ಅದೃಷ್ಟ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಡಿ.25 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ನೌಕರರ ಭವನದಲ್ಲಿ ನಡೆಯಲಿರುವ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಂಗವಾಗಿ ಹಿರಿಯ ನಾಗರಿಕರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಿಜೇತ ಸ್ಪರ್ಧಿಗಳು: 60 ವರ್ಷ ಮತ್ತು 70 ವರ್ಷ ಮೇಲ್ಪಟ್ಟವರೆಂದು ವಿಂಗಡಿಸಿ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಿದ್ದು 60 ವರ್ಷ ವಿಭಾಗದ 50 ಮೀ. ಓಟ ಸ್ಪರ್ಧೆಯಲ್ಲಿ ರಾಜಗೋಪಾಲ್.ಜೆ.ಸಿ. ಪ್ರಥಮ, ಶ್ರೀನಿವಾಸ್.ವಿ ದ್ವಿತೀಯ ಹಾಗೂ ಹೈದರ್ ಅಲೀಖಾನ್ ತೃತೀಯ, ಗುಂಡು ಎಸೆತದಲ್ಲಿ ಹೈದರ್ ಅಲೀಖಾನ್ ಪ್ರಥಮ, ಶ್ರೀನಿವಾಸ್.ವಿ ದ್ವಿತೀಯ ಹಾಗೂ ವೆಂಕಟರೋಣಪ್ಪ ತೃತೀಯ, ಬುಟ್ಟಿಯಲ್ಲಿ ಚೆಂಡು ಹಾಕುವುದರಲ್ಲಿ ಗೋಪಾಲಪ್ಪ.ವಿ. ಪ್ರಥಮ, ಆಂಜನೇಯಶೆಟ್ಟಿ ದ್ವಿತೀಯ ಹಾಗೂ ಶ್ರೀನಿವಾಸ್.ವಿ ತೃತೀಯ, ತೆಂಗಿನಕಾಯಿ ಅದೃಷ್ಟ ಪರೀಕ್ಷೆಯಲ್ಲಿ ಹೈದರ್ ಅಲೀಖಾನ್ ಪ್ರಥಮ, ಶಂಕರನಾರಾಯಣ ಶೆಟ್ಟಿ ದ್ವಿತೀಯ ಹಾಗೂ ರಾಮಕೃಷ್ಣ.ವಿ.ಸಿ ತೃತೀಯ, 70 ವರ್ಷ ಮೇಲ್ಪಟ್ಟವರ ವಿಭಾಗದ 25ಮೀ. ಓಟದ ಸ್ಪರ್ಧೆಯಲ್ಲಿ ಚಿಕ್ಕರಾಮಯ್ಯ ಪ್ರಥಮ, ರಾಮಕೃಷ್ಣ.ಎನ್. ದ್ವಿತೀಯ ಹಾಗೂ ಲಕ್ಷ್ಮೀನಾರಾಯಣಶೆಟ್ಟಿ.ಪಿ.ಎ. ತೃತೀಯ, ಗುಂಡು ಎಸೆತದಲ್ಲಿ ರಾಮಕೃಷ್ಣ.ಎನ್. ಪ್ರಥಮ, ಮಹಬೂಬ್ ಕೆ.ಎಂ. ದ್ವಿತೀಯ ಹಾಗೂ ಲಕ್ಷ್ಮೀನಾರಾಯಣಶೆಟ್ಟಿ.ಪಿ.ಎ. ತೃತೀಯ, ಬುಟ್ಟಿಯಲ್ಲಿ ಚೆಂಡು ಹಾಕುವುದರಲ್ಲಿ  ಗೋಪಾಲಕೃಷ್ಣಯ್ಯ.ಆರ್.ವಿ. ಪ್ರಥಮ, ಲಕ್ಷ್ಮೀನಾರಾಯಣಶೆಟ್ಟಿ.ಪಿ.ಎ. ದ್ವಿತೀಯ ಹಾಗೂ ನಾರಾಯಣಸ್ವಾಮಿ ತೃತೀಯ ಸ್ಥಾನ ಮತ್ತು ತೆಂಗಿನಕಾಯಿ ಅದೃಷ್ಟ ಪರೀಕ್ಷೆಯಲ್ಲಿ ಚಿಕ್ಕರಾಮಯ್ಯ ಪ್ರಥಮ, ಚಂದ್ರಶೇಖರ್.ಕೆ.ಸಿ. ದ್ವಿತೀಯ ಹಾಗೂ ನಾರಾಯಣಸ್ವಾಮಿ ತೃತೀಯ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement