ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಮಿಟಗಾನಹಳ್ಳಿಯಲ್ಲಿ ಕಲಿಕೋತ್ಸವ

Rashmi Kasaragodu
Updated On : 25 Dec 2013, 2:12 am

ಚಿಂತಾಮಣಿ: ತಾಲೂಕಿನ ಉಪ್ಪರಪೇಟೆ ಪಂಚಾಯ್ತಿಯ ಅಮಿಟಗಾನಹಳ್ಳಿ ಕ್ಲಸ್ಟರ್ನಲ್ಲಿ ಕಲಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯೋಪಾಧ್ಯಾಯ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಕಲಿಕೋತ್ಸವ ಸಹಕಾರಿಯಾಗಿದ್ದು, ಇಂತಹ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಸಕ್ರಿಯವಾಗಿ ಭಾಗವಹಿಸಲು ಕೋರಿದರು. ಕ್ಲಸ್ಟರ್ನ ಸಿಆರ್ಪಿ ಪ್ರಭಾಕರ್, ಶಾಲೆಯ ಎಲ್ಲಾ ಮಕ್ಕಳು ಸ್ಪರ್ಧಿಸಬೇಕು, ಕಲಿಕೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಶಸ್ತಿ, ಪ್ರಮಾಣ ಪತ್ರಗಳನ್ನು ನೀಡಲಾಗುವುದೆಂದು ತಿಳಿಸಿದರು. ಬಹುಮಾನ ವಿತರಿಸಿ ಮಾತನಾಡಿದ ಎ. ಗುಟ್ಟಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕೆ.ವಿ. ಸುಬ್ರಮಣ್ಯಂ, ಸೋಲೆ ಗೆಲುವಿನ ಸೋಪಾನ. ಈ ದಿನ ಸೋತ ಮಕ್ಕಳು ಮುಂದಿನ ಸ್ಪರ್ಧೆಯಲ್ಲಿ ಗೆಲ್ಲುವ ಅವಕಾಶವಿರುತ್ತದೆ. ಸೋಲಿಗೆ ವಿಚಲಿತರಾಗದೆ ಅಭ್ಯಾಸವ ಮುಂದುವರೆಸಲು ತಿಳಿಸಿದರು. ಮುಖ್ಯ ಶಿಕ್ಷಕ ದಶರಥ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement