ಪೊಲೀಸರ ಏಕಪಕ್ಷೀಯ ಧೋರಣೆ: ಪ್ರತಿಭಟನೆ
ಚಿಂತಾಮಣಿ: ಹಲವು ಡೋಂಗಿ ದಲಿತ ನಾಯಕರ ಮಾತುಗಳ ಒತ್ತಡಕ್ಕೆ ಮಣಿದು ಪೊಲೀಸರು ಸವರ್ಣೀಯರ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕುತ್ತಿರುವುದನ್ನು ವಿರೋಧಿಸಿ ಮಂಗಳವಾರ ರಾತ್ರಿ ಶಿಂಗಸಂದ್ರ ಗ್ರಾಮಸ್ಥರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಪೊಲೀಸ್ ಅಧಿಕಾರಿಗಳ ಏಕಪಕ್ಷಿಯ ದೋರಣೆ ವಿರುದ್ಧ ಒಕ್ಕಲಿಗರ ಯುವ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ತಾಲೂಕಿನ ಬುಕ್ಕನಹಳ್ಳಿ ತಿಮ್ಮಸಂದ್ರ ಗ್ರಾಮದ ಮಂಜುನಾಥ್ ಮತ್ತು ಸ್ನೇಹಿತರು ಕಳೆದ ಭಾನುವಾರ ಕುಡಿದ ಅಮಲಿನಲ್ಲಿ ಇದೇ ಗ್ರಾಮದ ಜಗದೀಶ್ ಎಂಬವರನ್ನು ಮೊಬೈಲ್ನಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡುವುದಾಗಿ ದಮಕಿ ಹಾಕಿದ ಘಟನೆಗೆ ಸಂಬಂಧಿಸಿ ಮಂಗಳವಾರ ಮಾತಿನ ಚಕಮುಕಿ ನಡೆದಿ, ಪೊಲೀಸರು ಅಮಾಯಕ ಜಗದೀಶ್, ಬಾಬು, ಗೋವಿಂದಪ್ಪ, ಕೃಷ್ಣಪ್ಪ ಎಂಬವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಘಟನೆಗೆ ಸಂಬಂಧಿಸಿ ಸಮರ್ಣೀಯರಿಂದ ಆಕ್ರೋಶ ವ್ಯಕ್ತವಾಯಿತು.
ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ವೆಂಕಟೇಶ್ ಮೂರ್ತಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಒಕ್ಕಲಿಗರ ಯುವ ವೇದಿಕೆಯ ಗೋಪಲ್ಲಿ ರಘುನಾಥರೆಡ್ಡಿ, ಆಂಜನೇಯರೆಡ್ಡಿ, ಈರುಳ್ಳಿ ಶಿವಣ್ಣ, ವಕೀಲ ಈಶ್ವರಗೌಡ, ಮೋಹನ್ರೆಡ್ಡಿ, ದೊಡ್ಡಗಂಜೂರು ಮಂಜುನಾಥ್, ಕೇಬಲ್ ಅಶ್ವಥ್ ರೆಡ್ಡಿ, ತಳಗವಾರ ಪ್ರತಾಪ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.