ಬಂಗಾರಪೇಟೆಯಲ್ಲಿ...
ಬಂಗಾರಪೇಟೆ: ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಅಕಾಲಿಕ ನಿಧನದಿಂದಾಗಿ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಂಗರಾಮಯ್ಯ ಹೇಳಿದರು. ಪಟ್ಟಣದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದಿಂದ ಸೋಮವಾರ ನಿಧನರಾದ ಸಾಹಿತ್ಯ ದಿಗ್ಗಜ ಜಿ.ಎಸ್. ಶಿವರುದ್ರಪ್ಪರವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಶಿವರುದ್ರಪ್ಪ ಎಂದರೆ ನೆನಪಾಗುವುದು ನವೋದಯ ಸಾಹಿತ್ಯದ ಅಪರೂಪದ ಕವನಗಳು, ವಿಮರ್ಶೆ ಗ್ರಂಥಗಳು. ಶಿವರುದ್ರಪ್ಪ ಬರೀ ಸಾಹಿತಿ ಅಲ್ಲ ಅವರು ಕನ್ನಡ ಹೋರಾಟಗಾರರೂ ಆಗಿದ್ದರು. ಇವರು ದೂರವಾಗಿರುವುದು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಹೇಮಂತ್ ಕುಮಾರ್, ಆರ್. ಜಗದೀಶ್, ಪ್ರಸಾದ್, ಮುರಳಿ, ಬೇಕರಿ ಶ್ರೀನಿವಾಸ್, ಲಯನ್ ನಂದಾ ಇದ್ದರು.
ಯುವಕವಿಗಳಿಂದ ಶ್ರದ್ಧಾಂಜಲಿ: ಯುವ ಕವಿ ಕಾವ್ಯ ವೇದಿಕೆ ಮುಖಂಡ ಜಿ.ಟಿ. ರಾಮಚಂದ್ರ, ಸಾಹಿತಿ ಲಕ್ಷ್ಮಯ್ಯ, ಆತ್ಮವಿಶ್ವಾಸ ವೇದಿಕೆ ರಾಜ್ಯಧ್ಯಕ್ಷ ಎಂ.ಎನ್. ಭಾರದ್ವಾದ್, ಮುನಿಯಪ್ಪ ಮತ್ತಿತರರು ಅಗಲಿತ ಹಿರಿಯ ಸಾಹಿತಿ ಶಿವರುದ್ರಪ್ಪರಿಗೆ ಶ್ರದ್ಧಾಂಜಲಿ ಅರ್ಪಿಸಿದರು.