ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯುವಕರ ಮತಗಳು ಬಿಜೆಪಿ ಗೆಲುವಾಗಬೇಕು

Rashmi Kasaragodu
Updated On : 25 Dec 2013, 2:15 am

ಕೋಲಾರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ 12 ಕೋಟಿಗೂ ಹೆಚ್ಚು ನವ ಯುವಕರು ಮತದಾನ ಮಾಡುವ ಹಕ್ಕು ಪಡೆದಿದ್ದು ಯುವಕರ ಮತಗಳು ಬಿಜೆಪಿಯ ಗೆಲುವಿನ ಮೆಟ್ಟಲುಗಳು ಆಗಬೇಕಾಗಿದೆ ಎಂದು ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ತಮ್ಮೇಶ್ಗೌಡ ಆಶಯ ವ್ಯಕ್ತಪಡಿಸಿದರು.
ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಯುವ ಮೋರ್ಚಾ  ಕಾರ್ಯಕಾರಣಿ ಸಭೆಯಲ್ಲಿ  ಅವರು ಮತನಾಡಿ,ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹಗರಣಗಳು, ದೇಶವನ್ನು ಕಾಡುತ್ತಿರುವ ಅಭದ್ರತೆ, ಬಡತನ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಯುವ ಮತದಾರಲ್ಲಿ ಜಾಗೃತಿ ಮೂಡಿಸಿ, ಹೊಸ ಬದಲಾವಣೆಗೆ ಯುವ ಮೋರ್ಚಾ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ಮಹಾತ್ಮ ಗಾಂಧಿಯವರು ಬದುಕಿದಾಗಲೇ ಕಾಂಗ್ರೆಸ್ ಹಠಾವೋ ಎಂದು ಕರೆ ನೀಡಿದ್ದರು. ಆದರೆ, ಇದರ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮ ದೇಶದಲ್ಲಿ ಕಾಂಗ್ರೆಸ್ನ ದುರಾಡಳಿತಕ್ಕೆ ಕಾರಣವಾಯಿತು. ಈಗ ದೇಶದ ಪ್ರತಿಯೊಬ್ಬ ಮತದಾರ ನರೇಂದ್ರ ಮೋದಿಯ ಕೈ ಬಲಪಡಿಸುವ ಮೂಲಕ ಕಾಂಗ್ರೆಸ್ನ್ನು ಅಧಿಕಾರದಿಂದ ದೂರವಿಟ್ಟು, ದೇಶದ ಪ್ರಗತಿಗಾಗಿ ಬಿಜೆಪಿ ಸರ್ಕಾರ ರಚನೆಗೆ ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 6 ಬಾರಿ ಗೆದ್ದು, 2 ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಕೆ.ಹೆಚ್. ಮುನಿಯಪ್ಪನವರ ಸಾಧನೆ ಏನು ಎಂದು ಪ್ರಶ್ನಿಸಿದ ಅವರು, ಶಾಶ್ವತವಾದ ಯಾವುದಾದರೊಂದು ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದರಾ ಎಂದು ಪ್ರಶ್ನಿಸಿದರು.
ಮುಂಬರುವ ಚುನಾವಣೆಯಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರನ್ನು ಸೋಲಿಸುವ ಮೂಲಕ ಅವರೇ ಹಾಕಿಸಿರುವ ರೈಲಿನಲ್ಲಿಯೇ ಶಿಡ್ಲಘಟ್ಟಕ್ಕೆ ವಾಪಸು ಕಳುಹಿಸಬೇಕು ಎಂದರು.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಮೇಲೆ ಹಾದಿ ತಪ್ಪಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಶಾದಿಭಾಗ್ಯ, ವಿದ್ಯಾಸಿರಿ ಮತ್ತಿತರ ಯೋಜನೆಗಳನ್ನು ಎಲ್ಲಾ ವರ್ಗಕ್ಕೆ ನೀಡುವ ಬದಲು ಮತಕ್ಕಾಗಿ ಹೊಸ ನಾಟಕ ಆರಂಭಿಸಿದ್ದಾರೆ, ಇವರ ನಿಜವಾದ ಬಣ್ಣ ಜನರಿಗೆ ತಿಳಿಸುವ ಮೂಲಕ ತಕ್ಕ ಪಾಠ ಕಲಿಸೋಣವೆಂದರು.
ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ್ಕುಮಾರ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಅಲೆ ನಡೆಯುತ್ತಿದ್ದು, ಇದನ್ನು ಕೋಲಾರ ಲೋಕಸಭಾ ಕ್ಷೇತ್ರದಲ್ಲೂ ಬಳಸಿಕೊಂಡು ಕಾಂಗ್ರೆಸ್ ಮುಕ್ತ ಕೋಲಾರನ್ನು ಮಾಡಿ ಎಂದರು.
ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ ಮಾತನಾಡಿ, ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಮಂತ್ರಿಗಳನ್ನಾಗಿ ಮಾಡುವಂತಹ ಸಂಕಲ್ಪವನ್ನು ಯುವಪಡೆ ಮಾಡಬೇಕಾಗಿದೆ, ಕೋಲಾರ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಹೋಬಳಿಯಲ್ಲಿ ಮುಂದಿನ ದಿನಗಳಲ್ಲಿ 150 ಜನರ ಬೈಕ್ ರ್ಯಾಲಿ ನಡೆಸುವ ಮೂಲಕ ಯುವ ಪಡೆಯನ್ನು ಸಂಘಟಿಸುವ ಕೆಲಸ ನಡೆಯಲಿದೆ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಮೋದ್, ಗ್ರಾಮಾಂತರ ಪ್ರದೇಶದ ಅಧ್ಯಕ್ಷ ಪುನೀತ್, ಬಿಜೆಪಿ ನಗರ ಅಧ್ಯಕ್ಷ ಜಯಂತಿ ಲಾಲ್, ಚಿನ್ನಾಪುರ ನಾರಾಯಣಸ್ವಾಮಿ, ಶ್ರೀನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement