ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೇ ಅಂಡರ್ಪಾಸ್ ನಿರ್ಮಾಣಕ್ಕೆ ಮನವಿ

Rashmi Kasaragodu
Updated On : 25 Dec 2013, 2:14 am

ಮಾಲೂರು: ಭಾರತೀಯ ರೇಲ್ವೇ ಪ್ರಯಾಣಿಕರ ಮೂಲ ಸೌಕರ್ಯಗಳ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸೋಮವಾರ ಮಾಲೂರಿಗೆ ಭೇಟಿ ನೀಡಿ ಇಲ್ಲಿನ ರೈಲ್ವೇ ನಿಲ್ದಾಣ ಹಾಗೂ ಅಗಲೀಕರಣ ಆಗಬೇಕಿರುವ ರೇಲ್ವೇ ಸೇತುವೆ ಪರಿಶೀಲಿಸಿದರು.
ನಂತರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಅಧ್ಯಕ್ಷ ಗೋಪಾಲ್ ಗೌಡ, ಜಿಪಂ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಎಂ.ಆರ್. ರಂಗಪ್ಪ ಸ್ಥಳೀಯ ರೇಲ್ಲೇ ನಿಲ್ದಾಣದ ಮೂಲ ಸೌಕರ್ಯ ಹಾಗೂ ನೂಸಗೆರೆ ಬಳಿಯ ಅಂಡರ್ ಪಾಸ್ ಅವಶ್ಯಕತೆ ಬಗ್ಗೆ ವಿವರಿಸಿ, ಮನವಿ ಅರ್ಪಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಹಲವು ದಶಕಗಳಿಂದ ಬಾಕಿ ಉಳಿದಿರುವ ಇಲ್ಲಿನ ರೇಲ್ವೇ ಸೇತುವೆ ಅಗಲೀಕರಣ ರೈಲ್ವೇ ಇಲಾಖೆ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಾಡಬೇಕಿದ್ದು, ತಾಂತ್ರಿಕ ಆಡಚಣೆಯಿಂದ ಕಾಮಗಾರಿ ನಿಲುಗಡೆಯಾಗಿದೆ. ಈ ಸಂಬಂಧ ವಿಶೇಷ ಗಮನ ಹರಿಸಿ ಶೀಘ್ರ ಚಾಲನೆ ನೀಡುವುದಾಗಿ ತಿಳಿಸಿದರು.
ಗೋಪಾಲರೆಡ್ಡಿ, ಪುರಸಭೆ ಮಾಜಿ ಸದಸ್ಯ ಶ್ರೀನಿವಾಸ ಮೂರ್ತಿ, ಪಪಂ ಸದಸ್ಯ ಮಲ್ಲಿಕಪ್ಪ, ಹರೀಶ್, ವಕೀಲ ಆನಂದ್, ಡಾ.ನವೀನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement