ರೈತಭವನ ಕಾಮಗಾರಿಗೆ ಚಾಲನೆ
ಮಾಲೂರು: ಸ್ಥಳೀಯ ಕೃಷಿಕ ಸಮಾಜ ವತಿಯಿಂದ ಕೃಷಿಕ ಸಮಾಜದ ಕಟ್ಟಡದ ಮೇಲೆ 40 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸುತ್ತಿರುವ ರೈತಭವನದ ಕಾಮಗಾರಿಗೆ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಸೋಮವಾರ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ರೈತರ ಕೃಷಿಗೆ ಸಹಕಾರವಾಗುವ ಕಾರ್ಯಕ್ರಮಗಳು ಈ ಭವನದಲ್ಲಿ ನೆಡಯುವಂತಾಗಬೇಕು. ರೈತ ಭವನಕ್ಕಾಗಿ ಎರಡು ಹಂತದಲ್ಲಿ ತಲಾ 5 ಲಕ್ಷ ರು.ಗಳನ್ನು ನೀಡುವುದಾಗಿ ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಕೃಷಿಕ ಸಮಾಜದ ಚಟುವಟಿಕೆಗಳಿಗೆ ರಾಜ್ಯ ಸರ್ಕಾರದಿಂದ ನೇರವಾಗಿ ಹಣ ಬರದಿದ್ದರೂ ಇಲ್ಲಿನ ಜಿಪಂ ಹಾಗೂ ತಾ ಪಂ ಸಹಕಾರದಲ್ಲಿ ಕೃಷಿಕ ಸಮಾಜ ಕಟ್ಟಡವನ್ನು ಭೈರೇಗೌಡರು ಕೃಷಿಸಚಿವರಾಗಿದ್ದ ಅವಧಿಯಲ್ಲಿ ನಿರ್ಮಿಸಲಾಗಿತ್ತು ಎಂದರು. ಜಿಲ್ಲಾ ಘಟಕದ ಅಧ್ಯಕ್ಷ ವಡಗೂರು ನಾಗರಾಜ್ ಮಾತನಾಡಿದರು. ಜಿಪಂ ಸದಸ್ಯೆ ರತ್ನಮ್ಮ, ಮಂಜುಳವೆಂಕಟೇಶ್, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಗೋಪಾಲ್ಗೌಡ ಇದ್ದರು.