ರೈಲ್ವೆ ನಿಲ್ದಾಣದ ಸಮಸ್ಯೆಗಳ ಪರಿಶೀಲನೆ
ಬಂಗಾರಪೇಟೆ: ಪಟ್ಟಣದ ರೈಲ್ವೆ ನಿಲ್ದಾಣದ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ರೈಲ್ವೆ ಪ್ರಯಾಣಿಕ ಮೂಲ ಸೌಲಭ್ಯಗಳ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ, ಸ್ವಚ್ಛತೆ ಮರೀಚಿಕೆಯಾಗಿದೆ, ಇಲ್ಲಿಂದ ಯಾವುದೇ ರೈಲುಗಳು ಬೆಂಗಳೂರಿಗೆ ನೇರ ಸಂಪರ್ಕವಿಲ್ಲ ಎಂದು ದೂರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಸುತ್ತಮುತ್ತಲಿನ 80 ರೈಲು ದಟ್ಟನೆ ಹೆಚ್ಚಾಗಿದ್ದು, ಹೊಸ ರೈಲುಗಳನ್ನು ಒದಗಿಸಿದರೂ ಕಷ್ಟ, ಒದಗಿಸದಿದ್ದರೂ ಕಷ್ಟ ಆದ್ದರಿಂದ ಉಪವಲಯ ರೈಲು ಸಂಚಾರ ಕಲ್ಪಿಸುವ ಯೋಜನೆ ಕೇಂದ್ರದ ಮುಂದಿದೆ ಎಂದು ಹೇಳಿದರು.