ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಒಕ್ಕಲಿಗರ ಸಂಘದ ಚುನಾವಣೆ: ಬಿರುಸಿನ ಪ್ರಚಾರ ಆರಂಭ

Mainashree
Updated On : 26 Dec 2013, 12:13 pm

ಚಿಕ್ಕಬಳ್ಳಾಪುರ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ದಿನಗಣನೆ ಶುರುವಾಗಿರುವುದರ ನಡುವೆ ಪ್ರಚಾರ ಕಾರ್ಯ ಜಿಲ್ಲೆಯಲ್ಲಿ ಬಿರುಸಿನಿಂದ ನಡೆಯುತ್ತಿದೆ.  ಜ.5 ರಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಮಿತಿ ರಚನೆಗಾಗಿ ರಾಜ್ಯಾದ್ಯಂತ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳು ಎಲ್ಲೆಡೆ ಬಿರುಸಿನಿಂದ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಸವಲತ್ತುಗಳನ್ನು ಅರ್ಹರಿಗೆ ದೊರಕಿಸಿ ಕೊಡಲು ತಮಗೆ ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಜಿಲ್ಲಾದ್ಯಂತ ಚುನಾವಣೆ ಪ್ರಚಾರದ ಫ್ಲೆಕ್ಸ್‌ಗಳು,ಬ್ಯಾನರುಗಳು ರಾರಾಜಿಸುತ್ತಿದ್ದು ಪ್ರಣಾಳಿಕೆ ಅಭಿವೃದ್ಧಿಮಂತ್ರದ ಕರಪತ್ರಗಳು ಎಲ್ಲೆಡೆ ಹರಿದಾಡುತ್ತಿವೆ.    ಸಂಘದ ರಾಜ್ಯ ಖಜಾಂಚಿ ಯಲುವಹಳ್ಳಿ ಎನ್. ರಮೇಶ್, ಎಂ.ಎನ್. ಸದಾಶಿವ ರೆಡ್ಡಿ ಹಾಗೂ ವಕ್ಕಲೇರಿ ರಾಮುರನ್ನು ಒಳಗೊಂಡ ಸಿಂಡಿಕೇಟ್ ಸದಸ್ಯರು ತಾಲೂಕಿನ ಐತಿಹಾಸಿಕ ನಂದಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮನೆ ಮನೆಗೂ ತೆರಳಿ ಮತಯಾಚಿಸಿದರು.  ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ, ಅಭ್ಯರ್ಥಿ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ರೈತಪರ ಮತ್ತು ಜನಾಂಗದ ಪರವಾಗಿ ಅನೇಕ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಇದನ್ನು ಮುಂದುವರೆಸಿಕೊಂಡು ಹೋಗಲು ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಬೇಕೆಂದರು.  ಈ ಸಂದರ್ಭದಲ್ಲಿ ಒಕ್ಕಲಿಗರ ಜನಾಂಗದ ಮುಖಂಡರಾದ ಚಂದ್ರಶೇಖರ್, ತಾಯಪ್ಪ, ಚಂದ್ರಣ್ಣ, ಶಿವಣ್ಣ, ನಟರಾಜ್, ಮುರಳಿ, ಎಂ.ಎಸ್. ಶ್ರೀಧರ್, ರವಿ, ಮಂಜು, ಕೀರ್ತಿ ಹೈಟೆಕ್ ಸತೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement