ಕೆಜಿಎಫ್‌ನಲ್ಲಿ ಸಂಭ್ರಮದ ಕ್ರಿಸ್ಮಸ್
ಕೆಜಿಎಫ್: ಕೆಜಿಎಫ್‌ನಲ್ಲಿ ಕ್ರಿಸ್‌ಮಸ್ ಹಬ್ಬವು ಅತಿ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಕೆಜಿಎಫ್‌ನಲ್ಲಿ ಸುಮಾರು ಆಂಗ್ಲೋ ಇಂಡಿಯನ್ನರ ಕುಟುಂಬಗಳು ನೆಲೆಸಿದ್ದು, ವಿದೇಶದ ಮಾದರಿಯಲ್ಲಿ ಕ್ರಿಸ್‌ಮಸ್ ಆಚರಿಸಲಾಯಿತು. ಕ್ರಿಶ್ಚಿಯನ್ ಸಮುದಾಯದವರ ಆಕರ್ಷಣೆಗಾಗಿ ನಗರದ ಎಲ್ಲಾ ಅಂಗಡಿಗಳವರು ಬಣ್ಣ ಬಣ್ಣದ ದೀಪಾಲಂಕಾರ ಟೇಪು ಮತ್ತು ರಿಬ್ಬನ್‌ಗಳಿಂದ ಅಲಂಕರಿಸುವುದು, ಬಲೂನ್, ಆಕಾಶ ಬುಟ್ಟಿ, ಆಕರ್ಷಕ ಮೇಣದ ಬತ್ತಿ ಮತ್ತು ವಿಧವಿಧವಾದ ಯೇಸುವಿನ ಗೊಂಬೆಗಳು ಆಕರ್ಷಿಸುತ್ತಿದ್ದವು.