ಚಿಂತಾಮಣಿಯಲ್ಲಿ ವಾಜಪೇಯಿ ಜನ್ಮ ದಿನ
ಚಿಂತಾಮಣಿ: ಮಾಜಿ ಪ್ರಧಾನಿ ವಾಜಪೇಯಿ 90 ನೇ ವರ್ಷದ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ನಗರ ಘಟಕದ ವತಿಯಿಂದ ವಿದ್ಯಾ ಗಣಪತಿ ದೇವಾಲಯ ಹಾಗೂ ಕುರುಟಹಳ್ಳಿ ಗ್ರಾಮದ ವೀರಾಂಜನೇಯ ಸ್ವಾಮಿದಲ್ಲಿ ವಾಜಪೇಯಿ ರವರ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಸಿದ ಬಿಜೆಪಿ ಕಾರ್ಯಕರ್ತರು ನಂತರ ಸಿಹಿ ಹಂಚಲಾಯಿತು.
ಈ ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಎನ್. ಶಿವಣ್ಣ, ಪ್ರದಾನ ಕಾರ್ಯದರ್ಶಿ ಮಹೇಶ್, ವಕೀಲ ನಾ ಶಂಕರ್, ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾ ಉಪಾಧ್ಯಕ್ಷ ಬತ್ತಲಪಲ್ಲಿ ಸೀನಪ್ಪ ಸೇರಿದಂತೆ ಮುಖಂಡರಾದ ಪ್ರಕಾಶರೆಡ್ಡಿ, ರಮೇಶ್‌ಬಾಬು, ಪ್ರಕಾಶ್‌ಗುಪ್ರ, ನಾಗರಾಜ್ ಗುಪ್ತ, ಶಿವಕುಮಾರ್, ಅರುಣ್‌ಕುಮಾರ್, ಡಾಬಾ ಮಂಜುನಾಥ್, ತಿಪ್ಪನ್ನ ಸೇರಿದಂತೆ ಇನ್ನೂ ಹಲವು ಮುಖಂಡರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.