ಚೋಳನಗುಂಡೆಯಲ್ಲಿ ನಿರಂತರ ಜ್ಯೋತಿಗೆ ಚಾಲನೆ
ಮುಳಬಾಗಲು: ಗ್ರಾಮೀಣ ಪ್ರದೇಶದಲ್ಲಿ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸೌಲಭ್ಯ ಒದಗಿಸಲು ನಿರಂತರ ವಿದ್ಯುತ್ ಸೌಲಭ್ಯವನ್ನು ಜಾರಿಗೆ ತಂದಿದೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು. ತಾಲೂಕಿನ ಆವಣಿ ಹೊರವಲಯದ ಚೋಳನಗುಂಟೆ ಗ್ರಾಮದಲ್ಲಿ ಬುಧವಾರ ನಿರಂತರ ಜ್ಯೋತಿ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಅವರು, ಉಪ ಕೇಂದ್ರಗಳಾದ ಎಚ್. ಗೊಲ್ಲಹಳ್ಳಿ, ತಾಯಲೂರುಗೆ ಮಾರ್ಚ್ ತಿಂಗಳೊಳಗೆ ನಿರಂತರ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದರು. ಕೆಜಿಎಫ್ ಬೆಸ್ಕಾಂ ವಲಯ ಕಾರ್ಯಪಾಲಕ ಎಂಜನಿಯರ್ ಶಾಂತಕುಮಾರ್, ಡಿವೈಎಸ್ಪಿ ಸಿದ್ದಪ್ಪ, ಆವಣೆ ಗ್ರಾಪಂ ಅಧ್ಯಕ್ಷೆ ಭಾನುಪ್ರಿಯಾ, ತಾಪಂ ಅಧ್ಯಕ್ಷೆ ಸುಬ್ಬಮ್ಮ, ಮುಖಂಡರಾದ ಉತ್ತನೂರು ಶ್ರೀನಿವಾಸ್, ಕಲ್ಲುಪಲ್ಲಿ ಪ್ರಕಾಶ್, ಅಮರನಾರಾಯಣ, ಅವಣೆ ರವಿಕುಮಾರ್, ಜಿ. ರಾಮಲಿಂಗಾರೆಡ್ಡಿ, ಆರ್. ಕೃಷ್ಣಪ್ಪ, ಸದಸ್ಯ ವೆಂಕಟೇಶ್, ಬೆಸ್ಕಾಂ ಕಾರ್ಯಪಾಲಕ ಎಂಜನಿಯರ್ ಸತೀಶ್ ಮುಂತಾದವರು ಭಾಗವಹಿಸಿದ್ದರು.