ಜನಮನದಲ್ಲಿ ಉಳಿಯುವವನೇ ನಿಜವಾದ ನಾಯಕ: ಅಭಿಮತ
ಮಾಲೂರು: ಜನಮನದಲ್ಲಿ ಉಳಿಯುವಂತಹವನೇ ನಿಜವಾದ ನಾಯಕ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದರು. ಸ್ಥಳೀಯ ಕರವೇ ಇಲ್ಲಿನ ನೂಸಗೆರೆ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಪ್ರಾಂಗಾಣದಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಎಸ್. ಪ್ರಕಾಶ್ ಅವರ ಪುತ್ಥಳಿ ಅನಾವರಣದಲ್ಲಿ ಮಾತನಾಡಿ, ಕನ್ನಡದ ಹೆಸರಿನಲ್ಲಿ ಕನ್ನಡಿರಗ ಉದ್ದಾರ ಮಾಡುವುದಾಗಿ ಹೇಳುತ್ತ ತಮ್ಮ ಸ್ವಾರ್ಥಕ್ಕಾಗಿ ಸಂಘವನ್ನು ಹುಟ್ಟು ಹಾಕಿ ನಾಯಕರಾಗಲು ಹೊರಟ್ಟಿದ್ದಾರೆ. ಆದರೆ ಅಂತಹವರು ಎಂದೂ ನಾಯಕನಾಗುವುದಿಲ್ಲ. ಕನ್ನಡ ಕಟ್ಟಾಳು ಪ್ರಕಾಶ್ ಅವರ ನಾಯಕತ್ವ ಗುಣಗಳನ್ನು ಆದರ್ಶವಾಗಿಟ್ಟು ಕೊಂಡು ಹೋರಾಟ ಮಾಡಬೇಕು ಎಂದರು. ಪುರಸಭೆ ಮಾಜಿ ಅಧ್ಯಕ್ಷ ಸಿ. ಲಕ್ಷ್ಮಿನಾರಾಯಣ್ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ಅಪಾರ ಶಿಷ್ಯವೃಂದ ಹೊಂದಿದ್ದ ಪ್ರಕಾಶ್ ಹೋರಾಟ ಜೀವನದಲ್ಲಿ ಇನ್ನೂ ಉನ್ನತ್ತ ಸ್ಥಾನಕ್ಕೆ ಹೋಗುವ ಸಂಭವವಿತ್ತು. ಆದರೆ ವಿಧಿಯಾಟದಿಂದ ಹುಟ್ಟು ಹೋರಾಟಗಾರರನ್ನು ಕಲೆದುಕೊಂಡಿದ್ದೇವೆ ಎಂದರು. ಇದೇ ಸಂಧರ್ಭಧಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ ನಂದಾ ದೀಪ ಬುದ್ಧಿಮಾಂಧ್ಯ ವಸತಿ ಶಾಲೆ ಮಕ್ಕಳಿಗೆ ದಿವಂಗತ ಎಸ್. ಪ್ರಕಾಶ್ ಅವರ ನೆನಪಿನಲ್ಲಿ ಬಟ್ಟೆ ವಿತರಿಸಿದರು. ನೂಸಗೆರೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಿಸಲಾಯಿತು. ಸಮಾರಂಭ ನಂತರ ನಡೆದ ಉಚಿತ ಆರ್ಯುವೇದಿಕ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ರೋಗಿಗಳನ್ನು ತಪಾಸಣೆ ಮಾಡಲಾಯಿತು. ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಮೊದಲು ಪಟ್ಟಣದ ಬಸ್ ನಿಲ್ದಾಣದ ಆಟೋ ನಿಲ್ದಾಣವನ್ನು ಎಸ್. ಪ್ರಕಾಶ್ ಆಟೋ ನಿಲ್ದಾಣ ಎಂದು ರಾಜ್ಯಾಧ್ಯಕ್ಷ ನಾರಾಯಣಗೌಡ ನಾಮಫಲಕ ಅನಾವರಣ ಮಾಡಿದರು. ಮಾಜಿ ಶಾಸಕ ಎ.ನಾಗರಾಜ್, ಸಂಘಟನೆ ಜಿಲ್ಲಾಧ್ಯಕ್ಷ ರಾಘವೇಂದ್ರ ಮೇಡಿಹಾಳ್, ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ, ಕಾರ್ಯದರ್ಶಿ ಎಸ್.ಎಂ. ರಾಜು, ಮಹಿಳಾ ಘಟಕ ಅಧ್ಯಕ್ಷೆ ಲತಾಬಾಯಿ, ದಿವಂಗತ ಪ್ರಕಾಶ್ ಅವರ ಥರ್ಮಪತ್ನಿ ಸರಳಾ ಪ್ರಕಾಶ್, ಪುರಸಭೆ ಸದಸ್ಯರಾದ ಲಿಂಗೇಶ್, ರಾಮಮೂರ್ತಿ, ಮುರಳೀಧರ್, ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು, ಸದಸ್ಯರಾದ ಮಲ್ಲಿಕಾರ್ಜನಪ್ಪ, ರಮೇಶ್ ಇದ್ದರು.