ಜಿಲ್ಲಾದ್ಯಂತ ಸಂಭ್ರಮದ ಕ್ರಿಸ್ಮಸ್
ಕ.ಪ್ರ.ವಾರ್ತೆ ಕೋಲಾರ ಡಿ.25
ನಗರದ ಎಲ್ಲೆಡೆ ಕ್ರೈಸ್ತರು ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಈವ್ ಆಚರಿಸಿದರು. ಮಂಗಳವಾರ ರಾತ್ರಿಯಿಂದಲೇ ಕ್ರೈಸ್ತರು ತಮ್ಮ ಮನೆ ಹಾಗೂ ಚರ್ಚ್ಗಳಲ್ಲಿ ಕುಟುಂಬ ಪರಿವಾರ ಸಮೇತ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬುಧವಾರ ಬೆಳಿಗ್ಗೆ ಚರ್ಚ್ಗಳಿಗೆ ಹಾಜರಾಗಿ ಎಲ್ಲರೊಟ್ಟಿಗೆ ಕ್ರಿಸ್ಮ್ಸ್ ಈವ್ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ನಗರದ ಮೆಥೋಡಿಸ್ಟ್ ಚರ್ಚ್, ಸಂತ ಮೇರಿಯಮ್ಮ ದೇವಾಲಯ, ಕೋಲಾರ-ಬೆಂಗಳೂರು ರಸ್ತೆಯಲ್ಲಿರುವ ಬೆತ್ತನಿಯ ಕ್ರೈಸ್ತ ದೇವಾಲಯ, ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಈಲಂ ಮುಂತಾದ ಕಡೆ ಕ್ರೈಸ್ತ ಸಮುದಾಯದವರು ಕ್ರಿಸ್ಮಸ್ ಈವ್ನ್ ಸಂದೇಶ ಅಲಿಸಿದರು. ಚರ್ಚ್ಗಳ ಬಳಿ ಕ್ರಿಸ್ಮ್ಸ್ ತಾತ ಎಂದೇ ಕರೆಯಲ್ಪಡುವ ಸಾಂತಾ ಕ್ಲಾಸ್ಸ್ ಸಮುದಾಯದ ಜನರನ್ನು ಸ್ವಾಗತಿಸುತ್ತಿದ್ದ ಹಾಗೂ ಮಕ್ಕಳಿಗೆ ಚಾಕೊಲೆಟ್ಗಳನ್ನು ನೀಡಿ ಸಂತಸ ಉಂಟು ಮಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು.