ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರಲ್ಲಿ ಆಚರಣೆ

Mainashree
Updated On : 26 Dec 2013, 12:14 pm

ಮಾಲೂರು: ಬಿಜಿಪಿಯ ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರ 89ನೇ ಹುಟ್ಟಹಬ್ಬವನ್ನು ತಾಲೂಕಿನ ವಿವಿಧೆಡೆ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಬುಧವಾರ ಆಚರಿಸಿದರು.
ಬಿಜೆಪಿ ಯುವಮೋರ್ಚಾ ತಾಪಂ ಮಟ್ಟದಲ್ಲಿ ವಾಜಿಪೇಯಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್, ತಾಪಂ ಸದಸ್ಯ ಗೋಪಾಲ್‌ಗೌಡ, ಯುವಮೋರ್ಚಾ ಅಧ್ಯಕ್ಷ ರಾಜು, ಕುಟ್ಟಿ ಮುನಿರಾಜು, ಪಂಚೆ ನಂಜುಂಡಪ್ಪ, ಪುರಸಭೆ ಸದಸ್ಯೆ ಶ್ರೀವಲ್ಲಿ, ರಾಮಮೂರ್ತಿ, ಮಾಜಿ ಸದಸ್ಯರಾದ ಆಂಜಿನಪ್ಪ, ರಾಜಪ್ಪ, ಆಂಜಿ, ವೆಂಕಟೇಶ್, ರಾಜರಾಂ ಮತ್ತಿತರರು ಪಾಲ್ಗೊಂಡಿದ್ದರು.
ಪಟ್ಟಣದ ಹೊರವಲಯದ ವೈಟ್‌ಗಾರ್ಡ್‌ನಲ್ಲಿರುವ ನಂದಾದೀಪ ಬುದ್ಧಿ ಮಾಂಧ್ಯ ವಸತಿ ಶಾಲೆ ಮಕ್ಕಳಿಗೆ ಜಿಪಂ ಮಾಜಿ ಸದಸ್ಯ ಜಿ.ಇ. ರಾಮೇಗೌಡ ನೇತೃತ್ವದಲ್ಲಿ ಶ್ವೆಟರ್ಸ್ ವಿತರಿಸಲಾಯಿತು. ಗಾಂಧೀ ವೃತ್ತದಲ್ಲಿಯುವ ಮೋರ್ಚಾ ಸಂಚಾಲಕ ಮಂಜುನಾಥ್ ನೇತೃತ್ವದಲ್ಲಿ ಬಡಾವಣೆ ಜನತೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಜ್ವಾಲಮುಖಿ ಡಾ. ರಾಜ್ ಅಭಿಮಾನಿ ಸಂಘ, ರೇಲ್ವೆ ನಿಲ್ದಾಣ ಬಿಜೆಪಿ ಘಟಕಗಳು ಸಹ ವಾಜಪೇಯಿ ಜನ್ಮದಿನ ಆಚರಣೆ ಮಾಡಿದರು.
ಸಂಘಟನೆಯ ಕಾರ್ಯಕರ್ತರು ರೇಲ್ವೆ ನಿಲ್ದಾಣ ಬಳಿಯಿರುವ ಅನಾಥ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ 60ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಸ್ವೆಟರ್ ಹಾಗೂ ಪುಸ್ತಕ ಸಾಮಾಗ್ರಿಗಳನ್ನು ವಿತರಿಸಿದರು. ನಂತರ ಮಾಸ್ತಿ ವೃತ್ತದಲ್ಲಿ ಸಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement