ಸರಳ, ಸಜ್ಜನ ನೇತಾರ: ರವಿನಾರಾಯಣರೆಡ್ಡಿ
ಗೌರಿಬಿದನೂರು: ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳು ನಮ್ಮ ಬದುಕಿಗೆ ಆನುಕರಣೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ವಾಜಪೇಯಿ ಅವರಿಗೆ ಶುಭ ಕೋರಿದರು.
ಸರಳ ಹಾಗೂ ಸಜ್ಜನಿಕೆಯ ರಾಜಕೀಯ ಮುತ್ಸದ್ಧಿಯಾಗಿರುವ ಅವರ ರಾಜಕೀಯ ನಡಾವಳಿಕೆಗಳು ಎಂದೆಂದಿಗೂ ಉತ್ತಮ ದಾರಿ ದೀಪವಾಗಲಿದೆ ಎಂದರು.
ಮುಖಂಡರಾದ ಬಿ.ವಿ. ಗೋಪಿನಾಥ್, ಪುರಸಭಾ ಸದಸ್ಯ ಮಾರ್ಕೆಟ್ ಮೋಹನ್, ಡಿಪಾಳ್ಯ ಶಶಿಧರ್, ಚಿಕ್ಕಕುರುಗೋಡು ನಾಗರಾಜ್, ಬಿಜೆಪಿ ಜಿಲ್ಲಾ ವಕ್ತಾರ ಜಯಣ್ಣ ಉಪಸ್ಥಿತರಿದ್ದರು.