ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುದ್ದಿ ಸಂಕ್ಷೇಪ

Mainashree
Updated On : 26 Dec 2013, 12:52 pm

ಜೂಜು ಅಡ್ಡೆ ಮೇಲೆ ಅಪರಿಚಿತರ ದಾಳಿ: ನಗದು ದೋಚಿ ಪರಾರಿ
ಚಿಂತಾಮಣಿ: ಪೊಲೀಸರ ಸೋಗಿನಲ್ಲಿ ಬಂದ ಅಪರಿಚಿತ ಗುಂಪೊಂದು ಅಂದರ್‌ಬಾಹರ್ ಆಡುತ್ತಿದ್ದ ಜೂಜಕ್ಕಿಟ್ಟಿದ್ದ ಲಕ್ಷಾಂತರ ರು. ಹಣ ದೋಚಿ ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ದೂರನ್ನು ಸ್ವೀಕರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಘಟನೆ ವಿವರ: : ತಾಲೂಕಿನ ಚಿಂತಾಮಣಿ - ಮದನಪಲ್ಲಿ ರಸ್ತೆಯ ರೈಲ್ವೆ ಅಂಡರ್‌ಪಾಸ್ ಬಳಿ 23 ರಂದು ಸೋಮವಾರ ಸಂಜೆ  ತೋಪೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಟಾಟಾ ಸುಮೋ ವಾಹನದಲ್ಲಿ ಪೊಲೀಸರೆಂದು ಹೇಳಿ ದಾಳಿ ನಡೆಸಿ ಸುಮಾರು 3 ಲಕ್ಷ ರು. ನಗದು ಮತ್ತು ಆಡುತ್ತಿದ್ದವರ ಮೈಮೇಲಿದ್ದ ಚಿನ್ನದ ಕತ್ತಿನ ಸರ ಹಾಗೂ ಬೆಲೆ ಬಾಳುವ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿರುವ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದರೂ ಇಲ್ಲಿನ ಸ್ಥಳೀಯ ಪೊಲೀಸರು ಇದರ ಬಗ್ಗೆ ಇಲಾಖಾ ತನಿಖೆ ನಡೆಸದೇ ಇರುವ ಬಗ್ಗೆ ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬಲ್ಲ ಮೂಲಗಳ ಪ್ರಕಾರ ತಾಲೂಕಿನ ಬಟ್ಲಹಳ್ಳಿ ಠಾಣೆಯ ಕೃಷ್ಣಪ್ಪ ಮತ್ತು ರಾಜಣ್ಣ ಎಂಬುವವರು ಜೂಜಾಟದಲ್ಲಿ ತೊಡಗಿದವರ ಮಾಹಿತಿ ನೀಡಿ ಅಪರಿಚಿತ ವ್ಯಕ್ತಿಗಳನ್ನು ದಾಳಿ ಮಾಡಲು ಸಂಚು ರೂಪಿಸಿರಬಹುದೆಂದು ಈ ಪ್ರದೇಶದ ಜನರು ಅಂತೆ ಕಂತೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ
ಹಾಸನ: ಬಾಲಕಿ ಮೇಲೆ ಸಂಬಂಧಿಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಹೊಳೆನರಸೀಪುರ ತಾಲೂಕಿನಲ್ಲಿ ಅಪ್ರಾಪ್ತೆ ಮೇಲೆ ಸಂಬಂಧಿಕನೇ ಅತ್ಯಾಚಾರ ನಡೆಸಿದ್ದಾನೆ. ಈ ಸಂಬಂಧ ಆರೋಪಿ ವೆಂಕಟೇಶ್ ಎಂಬಾತನನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, 7 ನೇ ತರಗತಿ ಓದುತ್ತಿರುವ 13 ವರ್ಷದ ಬಾಲಕಿಯ ಮನೆಗೆ ಯಾರೂ ಇಲ್ಲದ ವೇಳೆ ಬಂದ ಕಾಮುಕ ವೆಂಕಟೇಶ್ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ವಿಷ ಸೇವಿಸಿ ರೈತ ಆತ್ಮಹತ್ಯೆ
ಮುಳಬಾಗಲು: ತಾಲೂಕಿನ ಮದ್ದೇರಿ ಗ್ರಾಮದ ನೆಂಟರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತರು ಚಿಕ್ಕಬಳ್ಳಾಪುರ ಜಿಲ್ಲೆಯ ಎ. ಗುಟ್ಟಹಳ್ಳಿ ಗ್ರಾಮದ ವಾಸಿ ಶ್ರೀನಿವಾಸಮೂರ್ತಿ (50) ಎಂದು ಗುರ್ತಿಸಲಾಗಿದ್ದು, ಕೃಷಿ ಹಾಗೂ ಇತರೆ ಸಾಲ ವಾಪಸ್ ನೀಡಲಾಗದೆ ನೆಂಟರ ಮನೆಗೆ ಬಂದಿದ್ದಾಗ ಅವರ ಹೊಲದ ಬಳಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಮೃತರು ಗ್ರಾಮದ ಸಂಬಂಧಿ ನಾರಾಯಣಪ್ಪ ಎಂಬುವರ ಮನೆಗೆ ಬಂದಿದ್ದರು. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement