ಕಾರಂಜಿಯಲ್ಲಿ ಸಕಾಲ ಯೋಜನೆ ನಾಟಕ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಾಲೂಕು ಕೇಂದ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಕಾಲ ಯೋಜನೆ ಕುರಿತಂತೆ ನಾಟಕ ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಎಸ್.ಪಿ. ಹರ್ಷಿತ್ ನೇತೃತ್ವದ ತಂಡದ ಅರ್ಪಿತ, ಹರ್ಬಾಸ್, ಮನೋಜ್, ಸೂರಜ್, ಗಿರಿಶ್, ನವೀನ್, ನರೇಶ್ ವಿದ್ಯಾರ್ಥಿಗಳ ತಂಡವನ್ನು ಶಾಲೆಯಲ್ಲಿ ಉಪ ಪ್ರಾಂಶುಪಾಲ ಎನ್.ಎಸ್. ನಾಗರಾಜ್ ರಾವ್, ಎನ್.ಆರ್. ರತ್ನವರ್ಮ, ಶಿಕ್ಷಕರಾದ ಅಶ್ವತ್ಥ್, ನಾರಾಯಣ್, ಗಣೇಶ್ ಪ್ರಸಾದ್, ವಿ.ಆರ್. ತಾರಾನಾಥ್, ಚಂದ್ರಶೇಕರ್, ನಟರಾಜ್ ಮತ್ತು ಶಿಕ್ಷಕ ವೃಂದ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.