ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಲು ಕಳೆದುಕೊಂಡು ನರಳುತ್ತಿದ್ದರೂ ಸಹಾಯಕ್ಕೆ ಬಾರದ ರೈಲ್ವೆ ಪೊಲೀಸರು

Rashmi Kasaragodu
Updated On : 27 Dec 2013, 2:05 am

ಬಂಗಾರಪೇಟೆ: ಆಕಸ್ಮಿಕವಾಗಿ ಕಾಲು ಜಾರಿ ಮಹಿಳೆಯೊಬ್ಬಳು ರೈಲಿಗೆ ಸಿಲುಕಿ ತನ್ನ ಎಡಕಾಲು ಕಳೆದುಕೊಂಡು ನೋವಿನಿಂದ ನರಳುತ್ತಿದ್ದರೂ ರೈಲ್ವೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ ಎಸಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೆಜಿಎಫ್ನ ಕೋರಮಂಡಲ ನಿವಾಸಿ ರುಕ್ಮಿಣಿ 55 ಎಂಬಾಕೆ ಬೆಂಗಳೂರಿಗೆ ತೆರಳಲು ಕೆಜಿಎಫ್ನಿಂದ ಪಟ್ಟಣಕ್ಕೆ ಸಂಜೆ ಬಂದಿದ್ದು, ನಂತರ ಬೆಂಗಳೂರಿನ ರೈಲು ಬಂದಾಗ ಚಲಿಸುತ್ತಿದ್ದಂತೆ ಹತ್ತುವಾಗ ಕಾಲುಜಾರಿ ಬಿದ್ದು ತಮ್ಮ ಎಡಕಾಲನ್ನು ಕಳೆದುಕೊಂಡು ತೀವ್ರ ರಕ್ತ ಸಾವ್ರದಿಂದ ಪ್ಲಾಟ್ಫಾರಂ 4ರಲ್ಲಿ ನರಳಾಡುತ್ತಿದ್ದರೂ ಯಾವೊಬ್ಬರು ಆಕೆ ರಕ್ಷಣೆಗೆ ಧಾವಿಸಿಲ್ಲ. ಸ್ಥಳದಲ್ಲೇ ಇದ್ದ ರೈಲ್ವೆ ಪೊಲೀಸರು ಬಂದು ಪರಿಶೀಲನೆ ಮಾಡಿದರೂ ಆಕೆಯನ್ನು ತಕ್ಷಣವೇ ಪಕ್ಕದಲ್ಲೇ ಇರುವ ರೈಲ್ವೆ ಆಸ್ಪತ್ರೆಗೆ ಸಾಗಿಸುವ ಗೋಜಿಗೆ ಹೋಗದೆ ನಿರ್ಲಕ್ಷ್ಯ ಮಾಡಿದರು. ಸುಮಾರು ಅರ್ಧಗಂಟೆ ಆ ಮಹಿಳೆ ನೋವಿನಿಂದ ನಿಲ್ದಾಣದಲ್ಲಿ ನರಳಾಟ ನೋಡಲಾಗದೆ ಸಾರ್ವಜನಿಕರು ಪೊಲೀಸರ  ಕಾರ್ಯವೈಖರಿ ವಿರುದ್ಧ ಮುಗಿಬಿದ್ದಾಗ ನಂತರ ರೈಲ್ವೆ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿ ವೈದ್ಯರಿಲ್ಲದ ಕಾರಣ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿ ಕೈ ತೊಳೆದುಕೊಂಡರು. ರೈಲ್ವೆ ನಿಲ್ದಾಣದಲ್ಲಿ ನಡೆಯುವ ಅವಘಡಗಳಿಗೆ ರೋಗಿಗಳನ್ನು ಆಸ್ಪತ್ರೆಗೆ ಸೇರಿದಲು ಸದಾ ಆಂಬುಲೈನ್ಸ್ ಇರುತ್ತಿತ್ತು, ಕಳೆದ ತಿಂಗಳಿಂದ ಅದು ಮಾಯವಾಗಿದೆ. ಅಲ್ಲದೆ ರೈಲ್ವೆ ಆಸ್ಪತ್ರೆಯಲ್ಲೂ ಸಹ ಯಾವ ವೈದ್ಯರು ಲಭ್ಯವಿರುವುದಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಅವಘಡ ನಡೆದರೂ ರೈಲ್ವೆ ಪೊಲೀಸರು ಲೆಕ್ಕಿಸದೆ ನಿರ್ಲಕ್ಷ್ಯ ಮಾಡುತ್ತಿರುವುದರ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೌಟುಂಬಿಕ ಕಲಹ: ವ್ಯಕ್ತಿ ಆತ್ಮಹತ್ಯೆ
ಬಂಗಾರಪೇಟೆ: ಕೌಟುಂಬಿಕ ಕಲಹದಿಂದ ಬೇಸತ್ತಿರುವ ನವ ವಿವಾಹಿತನೊಬ್ಬ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ತಾಲೂಕಿನ ಮಾಕಾರಲಹಳ್ಳಿ ಗ್ರಾಮದ ಪ್ರಕಾಶ್ 31 ಎಂಬಾತನೆ ಆತ್ಮಹತ್ಯೆಗೆ ಶರಣಾಗಿದ್ದು, ಮೃತ ವ್ಯಕ್ತಿಗೆ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದು, ಪ್ರತಿದಿನ ಕುಟುಂಬದಲ್ಲಿ ಕಲಹ ಉಂಟಾಗಿ ಪ್ರಕಾಶ್ಗೆ ನೆಮ್ಮದಿ ಇಲ್ಲದಾಗಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ಕಳೆದ ಬುಧವಾರ ರಾತ್ರಿ ವರದಾಪುರ ಗ್ರಾಮದ ಬಳಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement