ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆ.ಎಚ್. ಮುನಿಯಪ್ಪರಿಂದ ಸಾಲ ಕೊಡಿಸುವ ರಾಜಕೀಯ

Rashmi Kasaragodu
Updated On : 27 Dec 2013, 2:07 am

ಮುಳಬಾಗಲು: ಸೋಲುವ ಭೀತಿಯಿಂದ ಕೇಂದ್ರ ಸಚಿವ ಕೆ.ಎಚ್. ಮುವಿಯಪ್ಪನವರು  ಒಂದು ಕೋಮಿನ ಜನರನ್ನು ಓಲೈಸಲು ಕೆನರಾ ಬ್ಯಾಂಕ್ನಿಂದ ಒಂದೇ ಕೋಮಿನ ಹತ್ತು ಸಾವಿರ ಜನರಿಗೆ ಸಾಲ ಕೊಡಿಸುವ ಮೂಲಕವಾಗಿ ಸಾಲದ ರಾಜಕಾರಣ ಮಾಡುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೋಲಾರ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಕೆ.ಎಚ್. ಮುನಿಯಪ್ಪನವರು ಜಿಲ್ಲೆಯ ಅಭಿವೃದ್ಧಿಗಾಗಿ ಏನು ಮಾಡಿಲ್ಲ. ನಿರಂತರವಾಗಿ ಸುಳ್ಳು  ಭರವಸೆ ನೀಡುತ್ತ ಕಾಲ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಾಲ ಕೊಡಿಸುವುದು ತಪ್ಪಲ್ಲ, ಆದರೆ ಎಲ್ಲಾ ಕೋಮಿನ ಜನರಿಗೂ ಸಮನಾಗಿ ಸಾಲಕೊಡಿಸಬೇಕು ಓಟು ದೃಷ್ಟಿ ಇಟ್ಟು ಕೊಂಡು ಒಂದೇ ಕೋಮಿನ ಹತ್ತು ಸಾವಿರ ಮಂದಿಗೆ ಸಾಲ ಸೌಲಭ್ಯ ಒದಗಿಸಿರುವುದು ಸರಿಯಲ್ಲ ಎಂದು ನುಡಿದರು.
ಕೇಂದ್ರ ಸರ್ಕಾರ ಬಿಜಿಎಂಎಲ್ ಪುನರಾರಂಭಿಸಲು ಮುಂದಾಗಿದ್ದರೂ ಅದನ್ನು ಪ್ರಾರಂಭಿಸಲು ಮುನಿಯಪ್ಪ ಪ್ರಾಮಾಣೆಕ ಪ್ರಯತ್ನ ನಡೆಸಿಲ್ಲವೆಂದು ಆರೋಪಿಸಿದರು. ಮೋದಿಯವರು ಗೆಲ್ಲುವ ಅಭ್ಯರ್ಥಿಗಳ ಅಂತರ ಸಮೀಕ್ಷೆ ನಡೆಸಿ ಗೆಲುವಿನ ಮಾನದಂಡದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವರು ಎಂದ ಅವರು ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿರುವ ತಮಗೆ ಈ ಬಾರಿ ಸ್ಪರ್ಧಿಸಲು ಅವಕಾಶ ದೊರೆತುಡ ಮತದಾರರು ತಮ್ಮನ್ನು ಕೈಹಿಡಿಯುವರೆಂಬ ಆಶಾವಾದ ತಮ್ಮದಾಗಿದೆ ಎಂದರು.ಅಂಬರೀಶ್, ಕೋಳಿನಾಗರಾಜ್, ಶ್ರೀರಾಮಯ್ಯ, ಹರೀಶ್, ಸೊನ್ನವಾಡಿ ಮುನಿರಾಜು, ಶಂಕರಪ್ಪ, ಕೀಲಾಗಾಣೆ ನಾರಯಣಪ್ಪ, ನಿಚ್ಚನಕುಂಟೆ ರಮೇಶ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement