ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆ
ಮಾಲೂರು: ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕುಂತೂರು ಚಂದ್ರಪ್ಪ ಪುನರಾಯ್ಕೆಯಾಗಿದ್ದಾರೆ. ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಾಲಿ ಅಧ್ಯಕ್ಷ ಕುಂತೂರು ಚಂದ್ರಪ್ಪರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕವಿ ಮಾಸ್ತಿ ಕೃಷ್ಣಪ್ಪ, ಕಳೆದ ಮೂರು ವರ್ಷಗಳಲ್ಲಿ ಸಕ್ರೀಯವಾಗಿ ಚುಟುಕು ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯ ಪ್ರತಿಭೆಗಳಿಗೆ ಚಂದ್ರಪ್ಪ ನೀಡುತ್ತಿರುವ ಅವಕಾಶವನ್ನು ಗುರ್ತಿಸಿ ಅವರನ್ನು ಆರಿಸಲಾಗಿದ್ದು, ಅವರ ನೇತೃತ್ವದಲ್ಲಿ ಪರಿಷತ್ ಇನ್ನೂ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಉಪನ್ಯಾಸಕ ಎಚ್. ಸತ್ಯನಾರಾಯಣ್, ಸಾಹಿತಿ ವೇಣುಗೋಪಾಲ್ ವಹ್ನಿ, ಡಾ.ನಾ. ಮುನಿರಾಜು, ಕವಿ ಜ.ಮು. ಚಂದ್ರು, ನಾ. ಗುರುಮೂರ್ತಿ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಇದ್ದರು.