ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತುಂಡಾದ ರೈಲು ಬೋಗಿಗಳು; ತಪ್ಪಿದ ಅನಾಹುತ

Rashmi Kasaragodu
Updated On : 27 Dec 2013, 2:06 am

ಗೌರಿಬಿದನೂರು: ಜೈಪುರ- ಮೈಸೂರು ಎಕ್ಸ್ಪ್ರೆಸ್ ರೈಲು ಪಟ್ಟಣಕ್ಕೆ ಸಮೀಪದ ಆರ್ಟಿಒ ಚಕ್ ಪೋಸ್ಟ್ ಬಳಿ ಚಲಿಸುತ್ತಿರುವಾಗ ಬೋಗಿಗಳು ತುಂಡಾಗಿ 2 ಬೋಗಿಗಳು ಬೇರ್ಪಟ್ಟು ರೈಲು ನಿಲುಗಡೆಗೊಂಡಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಸುಮಾರು 20 ಕಿ.ಮೀ ವೇಗದಲ್ಲಿ ಬೆಂಗಳೂರು ಕಡೆಯಿಂದ ಹಿಂದೂಪುರದ ಕಡೆಗೆ ಹೋಗುತ್ತಿದ್ದ ರೈಲಿನ 24 ಬೋಗಿಗಳಲ್ಲಿ ಎಂಜಿನ್ ಹಿಂಭಾಗದ ಎರಡು ಬೋಗಿ ಬೇರ್ಪಟ್ಟು ಅದೃಷ್ಟವಶಾತ್ ಸ್ವಲ್ಪದೂರದಲ್ಲಿಯೇ ನಿಂತಿತು, ಇಂದರಿಂದ ಸ್ವಲ್ಪ ಸಮಯ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಆಂತಕದ ವಾತಾವಣ ಉಂಟಾಗಿತ್ತು. ನಂತರ ರೈಲ್ವೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತುಂಡಾಗಿದ್ದ ಬೋಗಿಯ ತುಕ್ಕುಹಿಡಿದು ಮುರಿದಿದ್ದ ಭಾಗವನ್ನು ಗ್ಯಾಸ್ವೆಲ್ಡಿಂಗ್ನಿಂದ ಬೇರ್ಪಡಿಸಿ ಒಂದು ಬೋಗಿಯನ್ನು ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ಉಳಿದ ಬೋಗಿಗಳೊಂದಿಗೆ ಎಂದಿನಂತೆ ಪ್ರಯಾಣವನ್ನು ಮುಂದುವರಿಸಿತು. ಸ್ಥಳಕ್ಕೆ ಸಿಪಿಐ ನಾಗರಾಜ್, ಪಿಎಸ್ಐ ಶಿವಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement