ನಾಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಶಾಖೆಯಿಂದ ಮಾಜಿ ಸೈನಿಕ ದಿ.ಚೌಡಪ್ಪರವರ ಸ್ಮರಣಾರ್ಥ ಹೋಬಳಿ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ರೆಡ್ ಕ್ರಾಸ್ ತಾಲೂಕು ಕಾರ್ಯದರ್ಶಿ ಜಿ.ವಿ. ವಿಶ್ವನಾಥ್ ತಿಳಿಸಿದ್ದಾರೆ.
ನಾಗರಿಕರ ಸಭೆಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಡಾ. ವಿಶಾಲ್ ಅವರ ನೇತೃತ್ವದಲ್ಲಿ ಜಿಲ್ಲೆಯ ತಾಲೂಕು ಶಾಖೆಗಳು ಹೆಚ್ಚಿನ ಸಂಖ್ಯೆ ರಕ್ತದಾನ ಶಿಬಿರಗಳನ್ನು ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸಿ ನಾಗರಿಕರ ಆರೋಗ್ಯ ಸಮಸ್ಯೆ ನಿವಾರಿಸಲು ಮುಂದಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಹಂಪಸಂದ್ರ ಅಮರನಾಥಬಾಬು ಮಾತನಾಡಿ, ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು ಹಾಗೂ ಇತರರನ್ನು ಪ್ರೇರೇಪಿಸಬೇಕು ಎಂದರು. ಹಂಪಸಂದ್ರ ಗ್ರಾಪಂ ಕಾರ್ಯದರ್ಶಿ ಬಿ. ವಿಶ್ವನಾಥ ಮಾತನಾಡಿದರು. ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್. ಅಶ್ವತ್ಥಮ್ಮ ಆದಿನಾರಾಯಣ, ಸದಸ್ಯರಾದ ಆದಿನಾರಾಯಣಸ್ವಾಮಿ, ಗೌರಮ್ಮ, ನಜೀರ್ ಅಹ್ಮದ್, ರಾಮಕೃಷ್ಣಪ್ಪ ಇದ್ದರು.