ಪೊಲೀಸರ ಕಾರ್ಯವೈಖರಿ ಖಂಡಿಸಿ ಪ್ರತಿಭಟನೆ
ಚಿಂತಾಮಣಿ: ಬಲಾಢ್ಯರ ಜೊತೆ ಶಾಮೀಲಾದ ಗ್ರಾಮಾಂತ ಠಾಣೆ ಸಬ್ಇನ್ಸ್ಪೆಕ್ಟರ್ ದಲಿತ ವಿರೋಧಿ ಕರ್ತವ್ಯ ಎಸಗುತ್ತಿದ್ದಾರೆಂದು ದಲಿತ ಮೈನಾರಿಟಿ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ತಾಲೂಕಿನ ಬುಕ್ಕನಹಳ್ಳಿ ಶಿಂಗಸಂದ್ರ ಗ್ರಾಮದ ಇಬ್ಬರ ಯುವಕರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಕಳೆದ 20 ರಂದು ವಿನಾಕಾರಣ ಅಮಾಯಕ ಹಿಂದುಳಿದ ಜಾತಿಗೆ ಸೇರಿದ ಯುವಕನ ಮೇಲೆ ಮಾರಣಾಂತಿ ದೌರ್ಜನ್ಯವೆಸಗಿರುವ ಘಟನೆಗೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಅಪರಾಧಿಗಳನ್ನು ಬಂಧಿಸದೆ ಬಲಾಢ್ಯರ ಜೊತೆ ಶಾಮೀಲಾಗಿದ್ದಾರೆ ಎಂದು ಆಆರೋಪಿಸಿದರು.
ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಸ್ಥಳೀಯ ಪೊಲೀಸರ ಕಾರ್ಯವೈಖರಿ ವಿರುದ್ಧ ದಿಕ್ಕಾರ ಕೂಗುತ್ತಾ, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.
ಘಟನಾಸ್ಥಳಕ್ಕೆ ವೃತ್ತ ನಿರೀಕ್ಷಕ ವೆಂಕಟೇಶಮೂರ್ತಿ ಆಗಮಿಸಿ ಬೇಡಿಕೆಗಳ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳ ಗಮನ್ಕೆ ತಂದು ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವದಾಗಿ ಭರವಸೆ ನೀಡಿದರು. ಕೋಡಿಗಲ್ ರಮೇಶ್, ಜಿ. ಸುರೇಶ್, ವೆಂಕಟರವಣಪ್ಪ, ಸೀಕಲ್ ನಾರಾಯಣಪ್ಪ ಇದ್ದರು.