ಶಾಸಕ ಶಿವಶಂಕರರೆಡ್ಡಿಗೆ ಸನ್ಮಾನ
ಗೌರಿಬಿದನೂರು: ಕರ್ನಾಟಕ ವಿಕಲಚೇತನರ ಸಂಘಟನೆ ಉಪಸಭಾಪತಿಗಳಾದ ಎನ್.ಎಚ್. ಶಿವಶಂಕರರೆಡ್ಡಿ ಅವರನ್ನು ಕೆ.ವಿ.ಎಸ್. ಸಂಸ್ಥೆಯ ರಾಜ್ಯಾಧ್ಯಕ್ಷ ಉಷಾಕಿರಣ್ ಮತ್ತು ರಾಜ್ಯ ಕಾರ್ಯದರ್ಶಿ ಕೆ.ಜಿ. ಸುಬ್ರಮಣಿ ಸಂಸ್ಥೆಯ ಸದಸ್ಯರು ಸನ್ಮಾನಿಸಿದರು. ಸಂಸ್ಥೆಗೆ ನೆರವಿನ ಹಸ್ತ ನೀಡಿ ಅಭಿವೃದ್ಧಿಗೆ ಸಹಕರಿಸಿದ ಪತ್ರಕರ್ತ ಪ್ರಕಾಶ್, ಪೊಲೀಸ್ ಮುಖ್ಯ ಪೇದೆ ಮುನಿವೆಂಕಟಪ್ಪ, ಎಂ.ಆರ್.ಡ್ಲ್ಯೂ. ಕೃಷ್ಣಪ್ಪ ಮುಂತಾದವರಿಗೆ ವಿಕಲಚೇತನ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಸತೀಶ್, ತಾಪಂ ಮಾಜಿ ಉಪಾದ್ಯಕ್ಷ ಮರಳೂರು ಪ್ರಕಾಶ್, ಜಿಪಂ ಸದಸ್ಯೆ ರಾಧಮ್ಮ ಗಂಗಾಧರ್, ಗ್ರಾಪಂ ಅಧ್ಯಕ್ಷ ಶ್ರೀರಂಗಪ್ಪ, ಜಿಲ್ಲಾ ಎಲ್.ಎಲ್.ಸಿ. ಅಧ್ಯಕ್ಷ ಸಂತೋಷ್ ರಾವ್, ಮುಖಂಡರಾದ ಬಾಬುನಾಯ್ಡು, ಖಲಂದರ್ ಪಾಷ, ಕೆ.ವಿ.ಎಸ್. ಸಂಸ್ಥೆಯ ರಾಜ್ಯಾಧ್ಯಕ್ಷ ಉಷಾಕಿರಣ್, ಉಪಾಧ್ಯಕ್ಷ ಖುಷಿಕುಮಾರ್, ರಾಜ್ಯ ಕಾರ್ಯದರ್ಶಿ ಕೆ.ಜಿ. ಸುಬ್ರಮಣಿ ಹುಸೇನ ಮತ್ತಿತರರು ಉಪಸ್ಥಿತರಿದ್ದರು.