ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುಳ್ಳು ಪ್ರಕರಣ ದಾಖಲಿಸಲು ಒತ್ತಡ: ಪ್ರತಿಭಟನೆ

Rashmi Kasaragodu
Updated On : 27 Dec 2013, 2:09 am

ಚಿಂತಾಮಣಿ: ಎರಡು ವರ್ಗಗಳ ನಡುವೆ ನಡೆದ ಜಗಳದಲ್ಲಿ ಸವರ್ಣೀಯರ ಮೇಲೆ ಜಾತಿನಿಂದನೆ ದೂರು ನೀಡುವಂತೆ ಡೋಂಗಿ ದಲಿತ ನಾಯಕ ಪ್ರೇರೇಪಣೆ ನೀಡಿದ್ದು, ಜನರನ್ನು ದಿಕ್ಕು ತಪ್ಪಿಸಲು ಮುಂದಾಗುತ್ತಿರುವ ಸಂಘಟನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಒಕ್ಕಲಿಗರ ಯುವ ವೇದಿಕೆ ಕಾರ್ಯಕರ್ತರು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಾಗತಿ ಗ್ರಾಪಂ ವ್ಯಾಪ್ತಿಯ ಶಿಂಗಸಂದ್ರ ಗ್ರಾಮದಲ್ಲಿ ಹಳೆ ವೈಶಮ್ಯದ ಹಿನ್ನೆಲೆಯಲ್ಲಿ ಎರಡು ವರ್ಗಗಳ ನಡುವೆ ಇತ್ತೀಚೆಗೆ ಜಗಳ ನಡೆದಿತ್ತು. ಇದಕ್ಕೆ ಸಂಬಂಧಿಸಿ ಸವರ್ಣೀಯರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಅಟ್ರಾಸಿಟಿ ದೂರು ದಾಖಲಿಸುವಂತೆ ದಲಿತ ಸಂಘಟನೆ ಮುಖಂಡ ಕೋಡಿಗಲ್ ರಮೇಶ್ ಒತ್ತಡ ಹೇರಿದ್ದು, ಸುಳ್ಳು ಮೊಕದ್ದಮೆ ಹೂಡಲು ಪ್ರಚೋದನೆ ನೀಡಿ ಮುಗ್ದ ಜನರನ್ನು ಬಲಿಕೊಡಲು ಮುಂದಾಗಿರುವ ಈತನನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಕೋಡಿಗಲ್ ರಮೇಶ್ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿ ಅಪರಾದ ಹಣೆಪಟ್ಟಿ ಹೊತ್ತಿದ್ದರೂ ದಲಿತ ಸಂಘಟನೆ ಹುಟ್ಟು ಹಾಕಿಕೊಂಡು ಜಾತಿ ಜಾತಿಗಳಲ್ಲಿ ಒಡುಕು ಮೂಡಿಸುತ್ತಾ ಗ್ರಾಮೀಣ ಜನರ ನೆಮ್ಮದಿ ಜೀವನಕ್ಕೆ ಕೊಲ್ಲಿ ಇಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಡಿವೈಎಸ್ಪಿ ಸಣ್ಣತಿಮ್ಮಪ್ಪ ಪ್ರತಿಭಟನಾಕಾರರನ್ನು ಸಮಾದಾನ ಪಡಿಸಿ ಕಾನೂನು ಚೌಕಟ್ಟಿನಡಿ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಒಕ್ಕಲಿಗರ ಯುವ ವೇದಿಕೆಯ ಗೋಪಲ್ಲಿ ರಘುನಾಥರೆಡ್ಡಿ, ಆಂಜನೇಯರೆಡ್ಡಿ, ಕೇಬಲ್ ಅಶ್ವಥರೆಡ್ಡಿ, ಈಶ್ವರಗೌಡ, ಕಾಗತಿ ರವಿ, ದೊಡ್ಡಗಂಜೂರು ಮಂಜುನಾಥ್, ಶ್ರೀನಿವಾಸಬಾಬು, ಮದ್ದೇರಿ ಅಶ್ವಥರೆಡ್ಡಿ, ನಾಗದೇನಹಳ್ಳಿ ನಾರಾಯಣಸ್ವಾಮಿ, ವೆಂಕಟರಾಮರೆಡ್ಡಿ, ನಾಗೇಶ್ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement