ಕೆರೆಗಳ ಅಭಿವೃದ್ಧಿಗೆ ಗಮನ ಹರಿಸಿ
ಕೆಜಿಎಫ್: ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸಮಾಲೀ ಪಾಟಿಲ್, ದುಡಿಮೆ ಮಾಡಿ ಉತ್ತಮ ಬೆಳೆ ಬೆಳೆದು ದೇಶಕ್ಕೆ ಅನ್ನ ನೀಡುವ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಅವಶ್ಯಕತೆಗೆ ಸರ್ಕಾರ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಕೆರೆಗಳ ಹೂಳೆತ್ತಬೇಕು, ಆಂಧ್ರಪ್ರದೇಶ ರಾಜ್ಯದಲ್ಲಿ ಪವರ್ ಸ್ಪ್ರೇಯಿಂಗ್ ಕೇವಲ 5 ಸಾವಿರಕ್ಕೆ ಸಿಗುತ್ತದೆ ಅದನ್ನೇ ನಮ್ಮ ರಾಜ್ಯದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ 16 ಸಾವಿರಕ್ಕೆ ಮಾರಾಟ ಮಾಡಿ ರೈತರ ಹೆಸರಲ್ಲಿ ಅನ್ನದಾತರ ಅನುದಾನಗಳನ್ನು ಕೊಳ್ಳೆಹೊಡೆಯುತ್ತಿರುವ ಸರ್ಕಾರದ ಧೋರಣೆಗಳನ್ನು ಖಂಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ರಾಜ್ಯ ಕಾರ್ಯಾಧ್ಯಕ್ಷ ಪಂಚೆ ನಂಜುಂಡಸ್ವಾಮಿ, ಜಿ.ಟಿ. ರಾಮಸ್ವಾಮಿ, ರಾಮು, ಹುಲ್ಕೂರು ಹರಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ನಾರಾಯಣಗೌಡ, ಬಂಗುವಾದಿ ನಾಗರಾಜಗೌಡ, ಹೂಹಳ್ಳಿ ನಾಗರಾಜ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ನಿಲಕಂಠಮುನೇಗೌಡ, ವಡ್ಡಹಳ್ಳಿ ಮಂಜುನಾಥ್, ಕೆ.ಶ್ರೀನಿವಾಸಗೌಡ, ನಲ್ಲೂರು ಶಂಕರ್, ಕಾರಿ ಪ್ರಸನ್ನಕುಮಾರ್, ದೊಡ್‌ಡಕಾರಿ ವಿಶ್ವನಾಥ್, ಸುಬ್ರಮಣಿ, ಮಂಜು, ಕೃಷ್ಣೇಗೌಡ, ಹೇಮಾರೆಡ್ಡಿ, ಕಣ್ಣೂರು ಗಣೇಶ್, ಮಂಜುನಾಥ್, ಮುನಿಯಪ್ಪ, ಮುನೇಗೌಡ, ನಾಗರಾಜಪ್ಪ, ಭೂಪಾಲನಾಯ್ಡು, ಗಂಗಪ್ಪ, ಕರಗನಾರಾಯಣಸ್ವಾಮಿ ಮತ್ತಿತರರೆ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.